ಸಕಲೇಶಪುರ :- ಹೊಸ ಬಸ್ ನಿಲ್ದಾಣದ ಮುಂಬಾಗದಲ್ಲಿ ಕೆಂಪೇಗೌಡ ಪುತ್ಥಳಿ ನಿರ್ಮಾಣ ಮಾಡಲು ಗುರುತಿಸಿರುವ ಜಾಗದಲ್ಲಿ ನಾಡ ಪ್ರಭು ಕೆಂಪೇಗೌಡ ಭಾವಚಿತ್ರಕ್ಜೆ ಪುಷ್ಪ ಅರ್ಪಣೆ ಮಾಡುವ ಮೂಲಕ ತಾಲ್ಲೂಕು ಆಡಳಿತದ ಜಯಂತಿ ಧಿಕ್ಕರಿಸಿ ನಾಡ ಪ್ರಭು ಕೆಂಪೇಗೌಡ ಜಯಂತಿಯನ್ನು ತಾಲ್ಲೂಕು ಒಕ್ಕಲಿಗರ ಸಂಘ, ವಿವಿಧ ಸಮುದಾಯ ಮತ್ತು ರಾಜಕೀಯ ನಾಯಕರು ಮತ್ತು ಒಕ್ಕಲಿಗರ ಸಂಘದ ಅಂಗ ಸಂಸ್ಥೆಗಳಾದ ಕೆಂಪೇಗೌಡ ಯುವ ಸೇನೆ, ಸಕಲೇಶ್ವರಿ ಒಕ್ಕಲಿಗರ ಮಹಿಳಾ ಸಂಘ, ತಾಲ್ಲೂಕು ಒಕ್ಕಲಿಗರ ನೌಕರರ ಸಂಘದ ವತಿಯಿಂದ ಅದ್ದೂರಿಯಾಗಿ ಆಚರಿಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷರು ಮಾಜಿ ಶಾಸಕರಾದ ಹೆಚ್ ಎಂ ವಿಶ್ವನಾಥ್ ರವರು ಸಕಲೇಶಪುರದಲ್ಲಿ ನಿರ್ಮಾಣ ಮಾಡಲು ಯೋಚಿಸಿರುವ ಬುದ್ದ, ಬಸವಣ್ಣ, ನಾಡ ಪ್ರಭು ಕೆಂಪೇಗೌಡ, ಹೇಮಾವತಿ ಪುತ್ಥಳಿ ನಿರ್ಮಾಣಕ್ಕೆ ತಾಲ್ಲೂಕು ಒಕ್ಕಲಿಗರ ಸಂಘ ಬೆಂಬಲಿಸುತ್ತದೆ ಎಂದರು.
ನಾಡ ಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ನಂತರ ಹಳೆಯ ಬಸ್ ನಿಲ್ದಾಣದವರಿಗೆ ಮೆರವಣಿಗೆ ಮೂಲಕ ಹಾಸನದಲ್ಲಿ ನಡೆಯುವ ರಾಜ್ಯ ಮಟ್ಟದ ನಾಡ ಪ್ರಭು ಕೆಂಪೇಗೌಡ ಜಯಂತಿಯಲ್ಲಿ ಪಾಲ್ಗೊಳ್ಳಲು ಸಮುದಾಯದ ಮತ್ತು ವಿವಿಧ ರಾಜಕೀಯ ಪಕ್ಷಗಳ ಹಾಗೂ ಸಮುದಾಯದ ಮುಖಂಡರು ವಾಹನ ಮೂಲಕ ತೆರಳಿದರು.
ಈ ಸಂದರ್ಭದಲ್ಲಿ ತಾಲ್ಲೊಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಮರಗತ್ತೂರು ಉಮೇಶ್, ಉಪಾಧ್ಯಕ್ಷ ನಂದಿ ಕೃಪ ದೇವರಾಜ್, ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷರು ಒಕ್ಕಲಿಗರ ಸಂಘದ ಕಾರ್ಯದರ್ಶಿ ಬೈರುಮುಡಿ ರಾಮಚಂದ್ರ, ಕೆ ಜಿ ಎಪ್ ಅಧ್ಯಕ್ಷ ಮೋಹನ್ ಕುಮಾರ್, ಕಸಬಾ ಬೆಳೆಗಾರರ ಸಂಘದ ಅಧ್ಯಕ್ಷ ಕೌಡಳ್ಳಿ ಲೋಹಿತ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರುಗಳಾದ ಕುಮಾರ್ ಸ್ವಾಮಿ,ಉಜ್ಮಾ ರುಜ್ಮಿ, ಹೆಚ್ ಡಿ ಪಿ ಎ ಆಧ್ಯಕ್ಷ ಕ್ಯಾನಹಳ್ಳಿ ಸುಬ್ರಹ್ಮಣ್ಯ, ರೋಟರಿ ಕಾರ್ಯದರ್ಶಿ ಜಾನಕೆರೆ ಪರಮೇಶ್, ದಲಿತ ಮುಖಂಡ ಲಕ್ಕಪ್ಪ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷ ಜೈ ಬೀಮ್ ಮಂಜುನಾಥ್, ಕಾಮನಹಳ್ಳಿ ಜಯಣ್ಣ, ಕೆಂಪೇಗೌಡ ಯವ ವೇದಿಕೆಯ ವಿಶಾಲ್ ಗೌಡ, ಬದ್ರಿಯಾ ಜಾಮ ಮಸಿದಿ ಕಾರ್ಯದರ್ಶಿ ಅಕ್ಬರ್ ಜುನೈದ್, ಮಾಜಿ ತಾಲ್ಲೂಕು ಪಂಚಾಯತಿ ಅಧ್ಯಕ್ಷ ರಂಗನಾಥ್, ತಾಲ್ಲೂಕು ಒಕ್ಕಲಿಗರ ಸಂಘದ ಹೆತ್ತೂರು ಹೋಬಳಿ ಅಧ್ಯಕ್ಷ ರಾಧ ಕೃಷ್ಣ, ಎಸಳೂರ ಹೋಬಳಿ ಅಧ್ಯಕ್ಷ ಯಡಕೇರಿ ಗಂಗಾಧರ, ಕಾಂಗ್ರೆಸ್ ಜಿಲ್ಲಾ ಕಾರ್ಮಿಕ ಘಟಕದ ಅದ್ಯಕ್ಷ ಬ್ಯಾಕರವಳ್ಳಿ ವಿಜಯ್ ಕುಮಾರ್, ಹಾನುಬಾಳ್ ಹೋಬಳಿ ಅಧ್ಯಕ್ಷ ರಾಜೀವ್, ಕಸಬಾ ಹೋಬಳಿ ಅಧ್ಯಕ್ಷ ಎಸ್ ಡಿ ಸತೀಶ್, ಒಕ್ಕಲಿಗರ ಸಂಘದ ನಿರ್ದೇಶಕರಗಳು ಉಪಸ್ಥಿತರಿದ್ದರು.