ಜೂನ್ 28ಕ್ಕೆ ಸಕಲೇಶಪುರದಲ್ಲಿ ಕಸಬಾ ಹೋಬಳಿ ಬೆಳೆಗಾರರ ಸಂಘದ ವತಿಯಿಂದ ವಸ್ತುಪ್ರದರ್ಶನ
ಕಸಬಾ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಕೌಡಳ್ಳಿ ಲೋಹಿತ್ ರಿಂದ ಪತ್ರಿಕಾಗೋಷ್ಠಿ.
ಸಕಲೇಶಪುರ: ರೈತರ ಅನುಕೂಲಕ್ಕಾಗಿ ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಕಸಬಾ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಕೌಡಳ್ಳಿ ಲೋಹಿತ್ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಕಸಬಾ ಹೋಬಳಿ ಬೆಳೆಗಾರರ ಸಂಘದ ವತಿಯಿಂದ ನನ್ನ ಅಧಿಕಾರದ 2 ವರ್ಷದ ಅವಧಿಯಲ್ಲಿ ಹಲವು ರೈತಪರ ಕಾರ್ಯಕ್ರಮಗಳನ್ನು ಮಾಡಲಾಗಿದ್ದು, ಕಳೆದ ಎರಡು ವರ್ಷದಲ್ಲಿ ಕಸಬಾ ಹೋಬಳಿ ರೈತರಿಗೆ ಗುರುತಿನಚೀಟಿ ಹಂಚಿಕೆ ಮಾಡಿದ್ದೇವೆ. ಕಾಡಾನೆ ಸಮಸ್ಯೆ ವಿರುದ್ದ ನಿರಂತರ ಹೋರಾಟ ಮಾಡುವ ಮೂಲಕ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇವೆ. ಅಲ್ಲದೆ ಕೃಷಿ ಅಧ್ಯಯನ ಪ್ರವಾಸ ಆಯೋಜಿಸುವ ಮೂಲಕ ರೈತರ ಜ್ಞಾನ ಹೆಚ್ಚಿಸಲು ನೆರವಾಗಿದ್ದೇವೆ. ಹೋಬಳಿಯ ಪ್ರತಿ ಗ್ರಾಪಂ ವ್ಯಾಪ್ತಿಯ ರೈತರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕಾರ್ಯಾಗಾರ ನಡೆಸಿದ್ದೆವೆ. ಅಲ್ಲದೆ ಅತಿವೃಷ್ಠಿ ಬೆಳೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇವೆ. ಜೂನ್ 28 ರಂದು ಅಧಿಕಾರ ಹಸ್ತಾಂತರ ಕಾರ್ಯಕ್ರಮದ ವೇಳೆ ಬೆಳೆಗಾರರ ಸಮ್ಮೇಳನ ಹಾಗೂ ಕೃಷಿ ವಸ್ತಪ್ರದರ್ಶನವನ್ನು ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದ ಆವರಣದಲ್ಲಿ ಬೆಳಿಗ್ಗೆ 10.30ಕ್ಕೆ ಆಯೋಜಿಸಲಾಗಿದ್ದು ಕೃಷಿ ವಸ್ತು ಪ್ರದರ್ಶನದ ಉದ್ಘಾಟನೆಯನ್ನು ಶಾಸಕ ಸಿಮೆಂಟ್ ಮಂಜುನಾಥ್, ಕಾರ್ಯಕ್ರಮದ ಉದ್ಘಾಟನೆಯನ್ನು ಸಹಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್ ರಾಜಣ್ಣ ಹಾಗೂ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ವೈ ವಿಜಯೇಂದ್ರ ನೆರವೇರಿಸಲಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಕಸಬಾ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಬಿ ಲೋಹಿತ್, ಮುಖ್ಯ ಅತಿಥಿಗಳಾಗಿ ಕರ್ನಾಟಕ ಬೆಳೆಗಾರರ ಒಕ್ಕೂಟ ಅಧ್ಯಕ್ಷ ಡಾ.ಎಚ್.ಟಿ ಮೋಹನ್ ಕುಮಾರ್, ಕೆ.ಜಿ.ಎ್ ಕಾರ್ಯದರ್ಶಿ ಕೆ.ಬಿ ಕೃಷ್ಣಪ್ಪ, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಕೆ.ಎನ್ ಸುಬ್ರಹ್ಮಣ್ಯ, ಕಾರ್ಯದರ್ಸಿ ಎಂ.ಬಿ ರಾಜೀವ್, ಗುರುವೇಗೌಡ ಕಲ್ಯಾಣ ಮಂಟಪದ ಅಭಿವೃದ್ದಿ ಸಮಿತಿ ಅಧ್ಯಕ್ಷ ಬಿ.ಡಿ ಬಸವಣ್ಣ,ಕಸಬಾ ಹೋಬಳಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷರುಗಳಾದ ಎಂ.ಎಚ್ ಪ್ರಕಾಶ್, ಕೃಷ್ಣಮೂರ್ತಿ ಖಂಡಿಗೆ, ಎಂ.ಆರ್ ಉದಯ್ ಕುಮಾರ್ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.ಸಮಾಜ ಸೇವಕ ಯುವ ಮುಖಂಡ ಪುನೀತ್ ಬನ್ನಳ್ಳಿ ರವರು ಸಂಘಕ್ಕೆ ಒಂದು ಲಕ್ಷ ರೂ ದೇಣಿಗೆ ನೀಡುತ್ತಿದ್ದಾರೆ ಅವರಿಗೆ ಕಸಬಾ ಹೋಬಳಿ ಬೆಳಗಾರರ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಿದರು.
ಸುದ್ದಿಗೋಷ್ಠಿಯಲ್ಲಿ ಕಸಬಾ ಹೋಬಳಿ ಬೆಳೆಗಾರರ ಸಂಘದ ಕಾರ್ಯದರ್ಶಿ ಆರ್.ಎಂ ಚಂದ್ರಶೇಖರ್, ಸಹ ಕಾರ್ಯದರ್ಶಿ ಎಚ್.ಆರ್ ಹರ್ಷ, ಉಪಾಧ್ಯಕ್ಷ ಬಿ.ಡಿ ಪ್ರಸನ್ನ ಕುಮಾರ್, ಖಚಾಂಚಿ ಎಚ್.ಎಲ್ ರಂಗಪ್ಪ, ಉಪಸ್ಥಿತರಿದ್ದರು.