ಸಕಲೇಶಪುರ : 12ನೇ ಶತಮಾನದ ಕ್ರಾಂತಿಕಾರಕ ಬಸವಣ್ಣನವರು ಹಾಗೂ ಕರ್ನಾಟಕದ ಬೆಂಗಳೂರು ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ವಿಚಾರದಲ್ಲಿ ಅಧಿಕಾರಿಗಳ ಧೋರಣೆಯು ಖಂಡನೀಯ ಎಂದು ಕೆಪಿಸಿಸಿ ಸದಸ್ಯ ಸಲೀಮ್ ಕೊಲ್ಲಹಳ್ಳಿ ಹೇಳಿದರು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕ್ರಾಂತಿವೀರ 12ನೇ ಶತಮಾನದಲ್ಲಿ ಬಸವಣ್ಣನವರು ಸರ್ವಧರ್ಮಿಯರಿಗೂ ಆದರ್ಶ ಪುರುಷ. ದಾಸೋಹ ಬಡವರಿಗೆ ಮತ್ತು ನಿರ್ಗತಿಗಳಿಗೆ ನೀಡಿದ ಪ್ರಥಮ ವ್ಯಕ್ತಿ. ಜಾತಿ ಅಸಮಾನತೆಯನ್ನು ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ ಕ್ರಾಂತಿಕಾರಕ ಎಂದರು.
ನಾಡಪ್ರಭು ಕೆಂಪೇಗೌಡರು ಕಟ್ಟಿದ ನಾಡು-ನುಡಿ ಬೆಂಗಳೂರಿಗೆ ಅಡಿಪಾಯ ಹಾಕಿ ಇಡೀ ವಿಶ್ವವೇ ಬೆಂಗಳೂರಿನ ಕಡೆಗೆ ತಿರುಗಿ ನೋಡುವಂತೆ ಮಾಡಿದ ಮಹಾಪುರುಷ. ಇವರ ಕಾಲದಲ್ಲೂ ಅತ್ಯಂತ ಹೆಚ್ಚು ಅಭಿವೃದ್ಧಿಯನ್ನು ಬೆಂಗಳೂರು ಕಂಡಿತು ಎಂದರು, ಇಂತಹ ಮಹಾಪುರುಷರು ನಾಡಿಗೆ ಕೊಟ್ಟಂತಹ ಕೊಡುಗೆಗಳನ್ನು ನೆನಪು ಮಾಡಿಕೊಳ್ಳುವಲ್ಲಿ ಇವರ ಪ್ರತಿಮೆಗಳು ಯುವ ಪೀಳಿಗೆಗಳಿಗೆ ಆದರ್ಶವಾಗಬೇಕು ಆ ನೆಟ್ಟಿನಲ್ಲಿ ಬಸವಣ್ಣನವರು ಮತ್ತು ಕೆಂಪೇಗೌಡರ ಪ್ರತಿಮೆ ಸಕಲೇಶಪುರಕ್ಕೆ ಅತ್ಯಗತ್ಯ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಮಹಾಪುರುಷರ ಪರವಾಗಿ ಅವರ ಪ್ರತಿಮೆಗಳ ಸ್ಥಾಪನೆಗೆ ಬೇಕಾಗಿ ನಡೆಯುವ ಪ್ರತಿಭಟನೆಗಳಲ್ಲಿ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿ ಸಹಮತವನ್ನು ನೀಡಲಿದ್ದಾರೆ. ಪ್ರತಿಮೆಯ ಕಾರ್ಯ ಪೂರ್ಣಗೊಳ್ಳುವವರೆಗೂ ವೀರಶೈವ ಮತ್ತು ಲಿಂಗಾಯಿತ ಸಮಾಜ ಹಾಗೂ ಒಕ್ಕಲಿಗ ಸಮಾಜದೊಂದಿಗೆ ಕೈಜೋಡಿಸಿಕೊಂಡು ನಮ್ಮೆಲ್ಲರ ಸಹಕಾರ ನೀಡುತ್ತೇವೆಂದು ಹೇಳಿದರು.