ಪ್ರಭಾವಿಗಳಿಂದ ಸರ್ಕಾರಿ ಕೆರೆ ಒತ್ತುವರಿ ಆರೋಪ: ಮಾನವ ಹಕ್ಕುಗಳ ರಕ್ಷಣಾ ಸಮಿತಿಯಿಂದ ಪ್ರತಿಭಟನೆ
ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75 ಹಾಲೇಬೇಲೂರು ಅಂಡರ್ ಪಾಸ್ ಸಮೀಪ ಕೊಲ್ಲಹಳ್ಳಿ ಗ್ರಾಮದ ಸರ್ವೆ ನಂ 64ರಲ್ಲಿ ಸುಮಾರು 1ಎಕರೆ 33ಗುಂಟೆ ಸರ್ಕಾರಿ ಕೆರೆಯಿದ್ದು ಕೆಲವು ಪ್ರಭಾವಿಗಳು ಅಕ್ರಮವಾಗಿ ಕೆರೆಯನ್ನು ಮುಚ್ಚಲು ಮುಂದಾಗಿದ್ದು ಕೂಡಲೆ ಕೆರೆಯನ್ನು ಕಬಳಿಸಲು ಮುಂದಾಗಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಕಾರ್ಯಕರ್ತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಶಿರಸ್ತೇದಾರ್ ಉಮೇಶ್, ಕಂದಾಯ ಇಲಾಖೆ ಇತರ ಅಧಿಕಾರಿಗಳು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂಧರ್ಭದಲ್ಲಿ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಜೀವನ್, ತಾಲೂಕು ಅಧ್ಯಕ್ಷ ವಿಜಯ್ ಕೌಡಹಳ್ಳಿ, ಕಾನೂನು ಸಲಹೆಗಾರ ಪ್ರದೀಪ್, ಪದಾಧಿಕಾರಿಗಳಾದ ಮಹೇಶ್, ಸಂತು ಇತರರು ಹಾಜರಿದ್ದರು.


                                    
