Saturday, November 23, 2024
Homeಸುದ್ದಿಗಳುಬಾಲ ಕಾರ್ಮಿಕ ಪದ್ಧತಿ ವಿರುದ್ಧ ಜಾಗೃತಿ ಅಗತ್ಯ ನ್ಯಾಯಧೀಶೆ - ಧನಲಕ್ಷ್ಮೀ ಅಭಿಪ್ರಾಯ

ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಜಾಗೃತಿ ಅಗತ್ಯ ನ್ಯಾಯಧೀಶೆ – ಧನಲಕ್ಷ್ಮೀ ಅಭಿಪ್ರಾಯ

 

ಸಕಲೇಶಪುರ: ಬಾಲ ಕಾರ್ಮಿಕ ಪದ್ಧತಿಯನ್ನು ಹೊಗಲಾಡಿಸಲು ಜನರಲ್ಲಿ ಜನಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ತಾಲೂಕು ಸಿವಿಲ್ ನ್ಯಾಯಾಧೀಶರು ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಧನಲಕ್ಷ್ಮೀ ಹೇಳಿದರು.

ಸೋಮವಾರ ತಾಲೂಕಿನ ಬಾಳ್ಳುಪೇಟೆಯ ಶರಣು ವಿದ್ಯಾ ಸಂಸ್ಥೆಯ ಬ್ಲಾಸಂ ಶಾಲೆಯಲ್ಲಿ
ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನದ ಅಂಗವಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಕಾರ್ಮಿಕ ಇಲಾಖೆ ಹಾಗೂ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ವತಿಯಿಂದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅರ್ಹತೆಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದುಡುಸಿಕೊಳ್ಳುವುದು ಕಾನೂನು ಬಾಹಿರ. ಆದರೂ ಕಾನೂನಿನ ಕಣ್ಣು ತಪ್ಪಿಸಿ ಚಿಕ್ಕ ಮಕ್ಕಳನ್ನು ದುಡಿಸಿಕೊಳ್ಳಲಾಗುತ್ತಿದೆ.ಈ ಬಗ್ಗೆ ವಿದ್ಯಾರ್ಥಿಗಳು ಇಲಾಖೆಗೆ ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡಬೇಕು ಇದರಿಂದ ಬಾಲ ಕಾರ್ಮಿಕ ಪದ್ಧತಿ ತೊಲಗಿಸಲು ಸಹಕಾರಿಯಾಗಲಿದೆ ಎಂದರು.
ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ಸಂಕ್ಷಿಪ್ತವಾಗಿ ವಕೀಲರಾದ ಸುಧೀಶ್ ರವರು ಉಪನ್ಯಾಸ ನೀಡಿ ಶಿಕ್ಷಣದಲ್ಲಿ ಸರ್ಕಾರಗಳು ಉಚಿತ, ಖಚಿತ ಹಾಗೂ ಪೈಸ್ಟಾರ್ ರೀತಿಯ ಶಿಕ್ಷಣವನ್ನು ಎಲ್ಲಾ ಮಕ್ಕಳಿಗೂ ನೀಡಬೇಕು, ಇದರಿಂದ ಮಾತ್ರ ದೇಶ ಅಭಿವೃದ್ದಿ ಕಾಣಲು ಸಾಧ್ಯ ಎಂದರು.

ಈ ಸಂಧರ್ಭದಲ್ಲಿ ಸಿವಿಲ್ ನ್ಯಾಯದೀಶರಾದ ಸುಧೀರ್, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪ, ಕಾರ್ಮಿಕ ಇಲಾಖೆ ನಿರೀಕ್ಷಕಿ ಮಂಗಳಗೌರಿ ವಕೀಲರಾದ ಸುದೀಶ್, ಶರಣು ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಷಣ್ಮುಖಯ್ಯ, ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಸಹಾಯಕರಾದ ಸುಂದರ್, ಉಪಸ್ಥಿತರಿದ್ದರು

RELATED ARTICLES
- Advertisment -spot_img

Most Popular