ಶನಿವಾರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2023 ನೇ ಸಾಲಿನಲ್ಲಿ ಕನ್ನಡದಲ್ಲಿ ಅತ್ಯನ್ನ ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಶಾರದ ಗುರುಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಗುರುಹಿರಿಯರನ್ನು ಗೌರವಿಸಿದಾಗ ನಾಗರೀಕ ಸಂಸ್ಕಾರಕ್ಕೆ ಅರ್ಥ ಬರಲಿದೆ. ಭವಿಷ್ಯದಲ್ಲಿ ಉತ್ತಮ ಸಾಧನೆ ತೊರಬೇಕಾದರೆ ಗುರುಗಳಿಗೆ ಗೌರವಕೊಡುವುದನ್ನು ಕಲಿಯ ಬೇಕಿದೆ. ನಿರಂತರ ಕಲಿಕೆಯೆ ಸಾಧನೆಯ ಮೊದಲ ಮೆಟ್ಟಿಲು. ಸಾಧನೆಗೆ ಎಂದು ಅಡ್ಡಮಾರ್ಗವಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಸಾಧನೆ ಮೂಲಕ ಪೋಷಕರು ಹಾಗೂ ಹುಟ್ಟೂರಿಗೆ ಹೆಸರು ತರಬೇಕು ಎಂದರು.
ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪ ಪ್ರಾಂಶುಪಾಲೆ ವೆಂಕಟಮ್ಮ ಮಾತನಾಡಿ, ಎರಡು ಸಾವಿರ ವರ್ಷ ಇತಿಹಾಸವಿರುವ ಕನ್ನಡ ಬಾಷೆಯನ್ನು ಉಳಿಸಿ ಬೆಳಸುವುದು ನಮ್ಮ ಕರ್ತವ್ಯವಾಗಿದೆ. ಕನ್ನಡಿಗರೆ ಕನ್ನಡ ಬಾಷೆಯ ಬಗ್ಗೆ ತಾತ್ಸರ ಮಾಡಿದರೆ ಮುಂದೆ ಪಶ್ಚಾತಾಪ ಪಡಬೆಕಾಗುತ್ತದೆ ಮಕ್ಕಳು ಚಿಕ್ಕಂದಿನಿಂದಲೇ ಸಣ್ಣ ಸಣ್ಣ ಪುಸ್ತಕಗಳನ್ನು ಓದುವುದರಿಂದ ಜ್ಷಾನ ವೃದ್ದಿಗೆ ಸಹಕಾರಿಯಾಗಲಿದೆ , ಕನ್ನಡ ಬಾಷೆ ನಮ್ಮ ಉಸಿರಾಗಿರ ಬೇಕು ಎಂದರು. ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಯಲ್ಲಿ ಕನ್ನಡ ಬಾಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿಧ್ಯಾರ್ಥಿಗಳಿಗೆ ಅಭಿನಂದಿಸಲಾಯಿತು
ಈ ವೇಳೆ ಕಸಾಪ ಪ್ರಧಾನ ಕಾರ್ಯಧರ್ಶಿಗಳಾದ ಎಸ್.ಡಿ ಆದರ್ಶ್,ಎಚ್.ಎಸ್ ಯೋಗೇಶ್,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಎನ್ ಕೃಷ್ಣಮೂರ್ತಿ,ಸಮಾಜಸೇವಕಿ ಚನ್ನವೇಣಿ ಎಂ ಶೆಟ್ಟಿ,ನಲ್ಲುಲ್ಲಿ ಸತೀಶ್ ಪಿಡಿಓ ಗೀರಿಶ್ ಮುಂತಾದವರು ಉಪಸ್ಥಿತರಿದ್ದರು