ಬೆಂಗಳೂರು ಹಾಸನ ಇಂಟರ್ ಸಿಟಿ ರೈಲು ಸಕಲೇಶಪುರದವರೆಗೆ ವಿಸ್ತರಣೆಗೆ ರೈಲು ಪ್ರಯಾಣಿಕರ ಹಿತರಕ್ಷಣಾ ವೇದಿಕೆ ಮನವಿ.
ಸಕಲೇಶಪುರ:ಪಟ್ಟಣದ ಲಕ್ಷ್ಮೀಪುರಂ ಬಡಾವಣೆಯಿಂದ ರೈಲ್ವೆ ಸ್ಟೇಷನ್‌ಗೆ ಹೋಗುವ ರಸ್ತೆ ಸುಮಾರು 200 ಮೀಟರ್ ಇರುತ್ತದೆ. ಹಾಸನ ಮಂಗಳೂರಿಗೆ ‘ಮೀಟರ್ ಗೇಜ್ ಮಾರ್ಗ ಇದ್ದು ಅದನ್ನು ಬ್ರಾಡ್‌ಗೇಜ್‌ಗೆ ಪರಿವರ್ತನೆ ಮಾಡಿದ ಸಮಯದಲ್ಲಿ ಈ ರಸ್ತೆಗೆ ಡಾಂಬರೀಕರಣ ಮಾಡಿದ್ದಾರೆ. ಅಂದಿನಿಂದ ಇಂದಿನ ವರೆಗೆ ಈ ರಸ್ತೆಯ ಬಗ್ಗೆ ಯಾವುದೇ ಕೆಲಸ ನಡೆದಿಲ್ಲ. ಆದ್ದರಿಂದ ಈ 200 ಮೀಟರ್ ರಸ್ತೆಯನ್ನು ಆದಷ್ಟು ಬೇಗ ಕಾಂಕ್ರೀಟೀಕರಣ ಮಾಡಿದ್ದಲ್ಲಿ ತುಂಬಾ ಬಾಳಿಕೆ ಬರಬಹುದು. ಕೂಡಲೇ ಈ ರಸ್ತೆಯ ಅಭಿವೃದ್ಧಿಗಾಗಿ ಮಂಜೂರಾತಿ ಮಾಡಲು ಕ್ರಮಕೈಗೊಳ್ಳಬೇಕಾಗಿ ಮನವಿ ಮಾಡುತ್ತೇವೆ ಹಾಗೂ ಬೆಂಗಳೂರಿನಿಂದ ಹಾಸನಕ್ಕೆ ರಾತ್ರಿ 9-10 ಕ್ಕೆ ಇಂಟರ್‌ಸಿಟಿ ರೈಲು ಹಾಸನಕ್ಕೆ ಬಂದು ತಂಗುತ್ತದೆ. ಈ ರೈಲನ್ನು ಸಕಲೇಶಪುರದ ವರೆಗೆ ವಿಸ್ತರಿಸಿ ಸಕಲೇಶಪುರದಲ್ಲಿ ತಂಗುವ ಹಾಗೆ ಮಾಡಿದರೆ ಸಕಲೇಶಪುರದ ಈ ಭಾಗದ ಜನರಿಗೆ ತುಂಬಾ ಅನುಕೂಲವಾಗುತ್ತದೆ. ಕೇವಲ 40 ಕಿ.ಮಿ, ಮಾತ್ರ ಈ ಮಾರ್ಗ ಹೆಚ್ಚುವರಿಯಾಗುತ್ತದೆ. ಆದ್ದರಿಂದ ಆದಷ್ಟು ಬೇಗ ಇದರ ಬಗ್ಗೆ ಗಮನಹರಿಸಿ ಅನುಕೂಲ ಮಾಡಿಕೊಡಬೇಕೆಂದು ಹುಬ್ಬಳ್ಳಿ ವಿಭಾಗದ swr ವ್ಯವಸ್ಥಾಪಕರಾದ ಸಂಜಯ್ ಕಿಶೋರ್ ರವರಿಗೆ ಮನವಿ ಯನ್ನು ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ನಾರಾಯಣ ಆಳ್ವ, ಕಾರ್ಯದರ್ಶಿ ದಯಾನಂದ ಸಕಲೇಶಪುರ ರೈಲು ನಿಲ್ದಾಣದಲ್ಲಿ ನೀಡಿದರು.