Sunday, November 24, 2024
Homeಸುದ್ದಿಗಳುಸಕಲೇಶಪುರನನ್ನನ್ನು ಸನ್ಮಾನಿಸುವಾಗ ಹಾರ ಶಾಲು ಬದಲು ಗಿಡಗಳನ್ನು ನೀಡಿ: ಶಾಸಕ ಸಿಮೆಂಟ್ ಮಂಜು

ನನ್ನನ್ನು ಸನ್ಮಾನಿಸುವಾಗ ಹಾರ ಶಾಲು ಬದಲು ಗಿಡಗಳನ್ನು ನೀಡಿ: ಶಾಸಕ ಸಿಮೆಂಟ್ ಮಂಜು

ಸಕಲೇಶಪುರ:  ಪಟ್ಟಣದ ಕುಡುಗರಹಳ್ಳಿಬಡಾವಣೆಯಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ  ದೀಪ ಬೆಳಗಿ ಸಸಿಗೆ ನೀರು ಹಾಕುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪರಿಸರವನ್ನು ಉಳಿಸುವ ಹೊಣೆ ನಿಮ್ಮ ಮೇಲಿದೆ. ಈ ಕಾಲೇಜಿನ ವಿದ್ಯಾರ್ಥಿಗಳು ಒಳ್ಳೆಯ ಪರಿಸರದಲ್ಲಿರುವುದು ಸಂತೋಷದ ವಿಷಯವಾಗಿದೆ. ಇಂದು ಪರಿಸರ ವಿನಾಶದಿಂದ ಹವಾಮಾನದಲ್ಲಿ ವ್ಯಾಪಕ ಬದಲಾವಣೆಯಾಗುತ್ತಿರುವುದು ಆತಂಕಕಾರಿಯಾಗಿದೆ. ಪರಿಸರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳು ಹೆಚ್ಚಿನ ಜಾಗೃತರಾಗಬೇಕು. ನನ್ನನ್ನು ಸನ್ಮಾನಿಸಲು ಬರುವವರು ನನಗೆ ಗಿಡ ನೀಡಿದರೆ ಸಂತೋಷವಾಗುತ್ತದೆ. ನಾನು ಸಾಧ್ಯವಾದಷ್ಟು ಅನುದಾನ ತಂದು ಕಾಲೇಜಿನ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದರು.

 

   ಕೌಶಿಕ್ ಮಾತನಾಡಿ ನೂತನವಾಗಿ ಆಯ್ಕೆಯಾಗಿರುವ ಶಾಸಕ ಸಿಮೆಂಟ್ ಮಂಜಣ್ಣನವರಿಗೆ ವಿದ್ಯಾರ್ಥಿಗಳ ಕುರಿತು ಅಪಾರವಾದ ಕಾಳಜಿಯಿದೆ. ವಿದ್ಯಾರ್ಥಿಗಳಿಗೆ ಏನಾದರೂ ಸಮಸ್ಯೆ ಇದ್ದಲ್ಲಿ ಮಂಜಣ್ಣನವರನ್ನು ನೇರವಾಗಿ ಭೇಟಿ ಮಾಡಿ ಸಮಸ್ಯೆಯ ಕುರಿತು ಅವರ ಅರಿವಿಗೆ ತನ್ನಿ, ಅವರು ಸಾಧ್ಯವಾದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂದರು

ಈ ಸಂಧರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ  ಡಾ.ಹರೀಶ್, ಉಪನ್ಯಾಸಕ ಸುಧೀರ್, ಕ್ಯಾಮನಹಳ್ಳಿ ಗ್ರಾ.ಪಂ ಸದಸ್ಯ ಸಚ್ಚಿನ್, ವಕೀಲ ಸುಧೀಶ್ ಗೌಡ, ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.

RELATED ARTICLES
- Advertisment -spot_img

Most Popular