ಆನೆ ದಾಳಿಯಿಂದ ವಿಚಾರವಾದಿ ಕೆ.ಎಸ್.ಭಗವಾನ್ ಬಚಾವ್
ಚಾಮರಾಜನಗರ: ಚಾಮರಾಜನಗರ ತಾಲೂಕಿನ ಕೆ.ಗುಡಿಯಲ್ಲಿ ಸಫಾರಿ ಜೀಪನ್ನು 6 ಆನೆಗಳ ಹಿಂಡು ಅಟ್ಟಾಡಿಸಿದ್ದು ಖ್ಯಾತ ವಿಚಾರವಾದಿ ಕೆ.ಎಸ್.ಭಗವಾನ್, ಚಾಮರಾಜನಗರದ ದಲಿತ ಮುಖಂಡ ವೆಂಕಟರಮಣಸ್ವಾಮಿ(ಪಾಪು) ಕೂದಲೆಳೆ ಅಂತರದಲ್ಲಿ ಪಾರಾಗಿದ್ದು ಗುರುವಾರದ ಸಫಾರಿಯಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕೆ.ಗುಡಿಯಲ್ಲಿನ ವನ್ಯಜೀವಿ ಸಫಾರಿಗೆ ಕೆ.ಎಸ್.ಭಗವಾನ್,ದಲಿತ ಮುಖಂಡ ಪಾಪು ಹಾಗೂ ಇನ್ನಿತರರು ತೆರಳಿದ್ದ ವೇಳೆ ಮರಿ ಜೊತೆ ಇದ್ದ ಆನೆ ಹಿಂಡು ದಾಳಿ ಮಾಡಲು ಮುಂದಾಗಿದ್ದು ಚಾಲಕನ ಸಮಯಪ್ರಜ್ಞೆಯಿಂದ ರಿವರ್ಸ್ ಗೇರಲ್ಲಿ ಜೀಪನ್ನು ಚಲಾಯಿಸಿ ಅಪಾಯದಿಂದ ಪಾರು ಮಾಡಿದ್ದಾನೆ.
ಮರಿ ಇದ್ದಿದ್ದರಿಂದ ಆನೆ ದಾಳಿ ಮಾಡಲು ಮುಂದಾಯಿತು, ಹಿಂಡಿನಲ್ಲಿ ಒಟ್ಟು 6 ಆನೆಗಳಿದ್ದವು ಅದೃಷ್ಟವಶಾತ್ ಜೀಪ್ ಕಂದಕಕ್ಕೆ ಬೀಳಲಿಲ್ಲ, ಅದೊಂದು ರೋಮಾಂಚಕ ಅನುಭವ ಎಂದು ದಲಿತ ಮುಖಂಡ ಪಾಪು ತಿಳಿಸಿದ್ದಾರೆ.