ರಾಷ್ಟ್ರೀಯ ಹೆದ್ದಾರಿ ವೈಜ್ಞಾನಿಕ ಕಾಮಗಾರಿ: ವಾಹನ ಸಂಚಾರದಲ್ಲಿ ಅಡಚಣೆ.
ಗುತ್ತಿಗೆದಾರ ರಾಜ್ ಕಮಲ್ ಕಂಪನಿ ವಿರುದ್ಧ ವಾಹನ ಸವಾರರ ಹಿಡಿಶಾಪ:ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ನಿಂತ ವಾಹನಗಳು
ಸಕಲೇಶಪುರ : ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಚತುಷ್ಪಕ ಕಾಮಗಾರಿ ನೆಡೆಸುತ್ತಿರುವುದು ಅವೈಜ್ಞಾನಿಕತೆಯಿಂದ ಕೂಡಿದ್ದು ಇದರಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ.
ಕೊಲ್ಲಹಳ್ಳಿ ಸಮೀಪ ಪ್ಲೇ ಓವರ್ ಕಾಮಗಾರಿ ನಡೆಯುತ್ತಿದ್ದು ಸದರಿ ರಸ್ತೆಯನ್ನು ಸ್ವಸಚಿತವಾಗಿ ಇಟ್ಟುಕೊಳ್ಳದೆ ಕಾಮಗಾರಿ ನಡೆಸುತ್ತಿರುವ ಹಿನ್ನೆಲೆ ರಸ್ತೆಯಲ್ಲಿ ನೀರು ತುಂಬಿ ವಾಹನಗಳು ಸಂಚಾರ ಮಾಡದಂತ ಪರಿಸ್ಥಿತಿ ಎದುರಾಗಿದೆ.
ಕಳೆದ ರಾತ್ರಿ ಸುರಿದ ಮಳೆಗೆ ಹಳೆ ರಸ್ತೆಯ ಒಂದು ಬದಿಯಲ್ಲಿ ನೀರು ತುಂಬಿಕೊಂಡು ವಾಹನಗಳು ಸಂಚರಿಸಲಾಗದೆ ಕಿ.ಮೀ ಗಟ್ಟಲೆ ಸಾಲುಗಟ್ಟಿ ನಿಂತಿದ್ದವು. ಹೊಸ ರಸ್ತೆ ಕಾಮಗಾರಿ ನಡೆಸುತ್ತಿರುವಾಗ ಹಳೆ ರಸ್ತೆಯನ್ನು ಸುಸಜ್ಜಿತವಾಗಿ ಇಟ್ಟುಕೊಳ್ಳಬೇಕಾದ್ದು ಗುತ್ತಿಗೆದಾರರ ಕರ್ತವ್ಯವಾಗಿದ್ದು ಆದರೆ ಇಲ್ಲಿ ನಡೆಯುತ್ತಿರುವ ಕಾಮಗಾರಿ ಸಂಪೂರ್ಣ ಅವಜ್ಞಾನಿಕತೆಯಿಂದ ಕೂಡಿದ್ದು ಬೆಂಗಳೂರು ಮಂಗಳೂರು ಸಂಚರಿಸುವ ವಾಹನ ಸವಾರರು ಗುತ್ತಿಗೆದಾರರ ಮೇಲೆ ಇಡೀ ಶಾಪ ಹಾಕುತ್ತಿದ್ದಾರೆ.
ಸ್ಥಳಕ್ಕೆ ವೃತ ನಿರೀಕ್ಷಕ ರಾಜು, ಪಿಎಸ್ಐ ಸುನಿಲ್ ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಇನ್ನು ಮಳೆಗಾಲ ಪ್ರಾರಂಭವಾಗಿಲ್ಲ ಆದರೂ ಈಗಲೇ ರಸ್ತೆಯ ದುಸ್ಥಿತಿ ಹೀಗಿದೆ ಮುಂದೇನು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತಿದೆ.