ಮೂಕನಮನೆ ಪಾಲ್ಸ್ ನ ವೀಕ್ಷಣ ಗೋಪುರ ಕಾಮಗಾರಿ ಪರಿಶೀಲಿಸಿದ ಶಾಸಕ ಸಿಮೆಂಟ್ ಮಂಜು.
ಸಕಲೇಶಪುರ: ಹೊಂಗಡಹಳ್ಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಕನಮನೆ ಜಲಪಾತ ವೀಕ್ಷಣ ಗೋಪುರದ ಕಾಮಗಾರಿಯನ್ನು ಬುಧುವಾರ ಶಾಸಕ ಸಿಮೆಂಟ್ ಮಂಜು ಪರಿಶೀಲನೆ ನಡೆಸಿದರು.
ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ಕರ್ನಾಟಕದ ಜಲಪಾತಗಳೊಂದಾದ ಮೂಕನ ಮನೆ ಪಾಲ್ಸ್ ಬಳಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ಪ್ರಸ್ತುತ ನಿರ್ಮಾಣವಾಗುತ್ತಿರುವ ವೀಕ್ಷಣ ಗೋಪುರ ಅವೈಜ್ಞಾನಿಕತೆಯಿಂದ ಕೂಡಿದ್ದು ಅಧಿಕಾರಿಗಳು ಶೀಘ್ರವೇ ತಪ್ಪನ್ನು ಸರಿಪಡಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಯಸಳೂರು ವಲಯ ಅರಣ್ಯ ಅಧಿಕಾರಿ ಜಗದೀಶ್, ವಳಲಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸುದರ್ಶನ್, ಹೊಂಗಡಹಳ್ಳ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದನ್ ಸೇರಿದಂತೆ ಮುಂತಾದವರಿದ್ದರು