ಸಕಲೇಶಪುರ : :”ರಾಷ್ಟ್ರ ವಿಕಾಸಕ್ಕಾಗಿ ಪತ್ರಕರ್ತರ ಜವಾಬ್ದಾರಿ”
ಪತ್ರಕರ್ತರ ಸ್ನೇಹ ಮಿಲನ ಕಾರ್ಯಕ್ರಮಕ್ಕೆ ಚಾಲನೆ
ಸಕಲೇಶಪುರ : ನಗರದ ಲಕ್ಷ್ಮೀಪುರಂ ಬಡಾವಣೆಯಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಸದ್ಭಾವನಾ ಭವನ ಬ್ರಹ್ಮಾಕುಮಾರೀಸ್ ನಲ್ಲಿ ಶುಕ್ರವಾರ ತಾಲೂಕು ಪತ್ರಕರ್ತರಿಗೆ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮವನ್ನು ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಳ್ಳು ಗೋಪಾಲ್ ಉದ್ಘಾಟನೆ ಮಾಡಿದರು.
ಕಾರ್ಯಕ್ರಮದ ಕುರಿತಾಗಿ ರಾಜಯೋಗಿನಿ ಬ್ರಹ್ಮಾಕುಮಾರಿ ಧನಲಕ್ಷ್ಮೀ ಅಕ್ಕನವರು ಪ್ರಾಸ್ತವಿಕ ನುಡಿಗಳನ್ನಾಡಿದರು.
ಸಕಲೇಶಪುರ ಕೇಂದ್ರದ ಮೇಲ್ವಿಚಾರಕರಾದ ಮಂಜುಳಾ ಅಕ್ಕನವರು ಸರ್ವರನ್ನು ಸ್ವಾಗತಿಸಿದರು.ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಚಾಮರಾಜನಗರ ಜಿಲ್ಲೆ ಕೇಂದ್ರದ ಆರಾಧ್ಯ ನಿರೂಪಣೆ ಮಾಡಿದರು.
ಈ ಸಂಧರ್ಭದಲ್ಲಿ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಎಂ ಮಂಜುನಾಥ್, ಪ್ರೆಸ್ ಕ್ಲಬ್ ತಾಲೂಕು ಅಧ್ಯಕ್ಷ ಟಿ. ಪಿ ಕೃಷ್ಣನ್ ಸೇರಿದಂತೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸದಸ್ಯರು, ವಿವಿಧ ಪತ್ರಿಕೆಗಳ ವರದಿಗಾರರು ಉಪಸ್ಥಿತರಿದ್ದರು