ಸಂಕ್ಲಾಪುರ ಮಠದ ಶ್ರೀಗಳನ್ನು ಭೇಟಿಯಾದ ಶಾಸಕ ಸಿಮೆಂಟ್ ಮಂಜುನಾಥ್
ಸಕಲೇಶಪುರ : ನೂತನ ಶಾಸಕರಾಗಿ ಆಯ್ಕೆಯಾದ ಸಿಮೆಂಟ್ ಮಂಜುನಾಥ್ ರವರು ಇಂದು ಆಲೂರು ತಾಲೂಕಿನ ಸಂಕ್ಲಾಪುರ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು.
ಶ್ರೀಗಳಾದ ಧರ್ಮರಾಜೇಂದ್ರ ಸ್ವಾಮಿಗಳನ್ನು ಭೇಟಿ ಮಾಡಿ ಗೌರವ ಸಲ್ಲಿಸಿದ ನಂತರ ಸಕಲೇಶಪುರ, ಆಲೂರು ಕಟ್ಟಾಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರೀಗಳಿಂದ ಕೆಲವು ಸಲಹೆಗಳನ್ನು ಪಡೆದುಕೊಂಡರು