Sunday, April 20, 2025
Homeಸುದ್ದಿಗಳುಸಕಲೇಶಪುರಶ್ರಿ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನೂತನ ಧ್ವಜಸ್ಥಂಭ ಪ್ರತಿಷ್ಠಾಪನೆ .

ಶ್ರಿ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನೂತನ ಧ್ವಜಸ್ಥಂಭ ಪ್ರತಿಷ್ಠಾಪನೆ .

ಸಕಲೇಶಪುರ. ಪಟ್ಟಣದ ಲಕ್ಷ್ಮಿ ಪುರಂ ಬಡಾವಣೆ ಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನೂತನ ದೇವರ ಧ್ವಜ ಸ್ಥಂಭ ಪ್ರತಿಷ್ಠಾಪನಾ ಪೂಜಾ ಶನಿವಾರದಿಂದ ಸೊಮವಾರದ ವರೆಗೆ ನಡೆಯಲಿದೆ
ದೇವಾಲಯದ ಆವರಣದಲ್ಲಿ ಸ್ವಾಮಿಗೆ.ಪೃಥಿಂಗರಿ ಹೋಮ, ಅಷ್ಟದ್ರವ್ಯ ಗಣಪತಿ ಹೋಮ, ಮೃತ್ಯುಂಜಯ ಹೋಮ‌,ಪಡಿಪೂಜೆ ಹಲವು ಪೂಜಾ ಕಾರ್ಯಗಳು ನಡೆಯುತಿದ್ದು. ಸೋಮವಾರ ಧ್ವಜ ಸ್ತಂಭ ಪ್ರತಿಷ್ಟಾಪನೆ ನಡೆಯಲಿದೆ. ನಂತರ ಮಹಾಂಗಳಾರತಿ ನಂತ ಅನ್ನ ಸಂತರ್ಪಣೆ ನಡೆಯಲಿದೆ. ಈ ಎಲ್ಲಾ ಪೂಜಾ ಕಾರ್ಯಕ್ರಮಗಳು ಕೆರಳದ ಸಂಪ್ರಾದಾಯಿಕ ತಂತ್ರಿಗಳಾದ ಶ್ರಿ ಕಾಂತರ ಮೋಹನ ತಂತ್ರಿಗಳು ಹಾಗೂ ದೇವಸ್ಥಾನ ಅರ್ಚಕರಾದ ಶ್ರಿ ಕೃಷ್ಣ ಮೂರ್ತಿ ಭಟ್ ರವರ ನೇತೃತ್ವದಲ್ಲಿ ನಡೆಯುತ್ತಿದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಲ್ಲಿ ಆಗಮಿಸಿ ದೇವರ ಕೃಪೆ ಪಾತ್ರರಾಗ ಬೇಕೆಂದು ಅಯ್ಯಪ್ಪ ಸೇವಾ ಟ್ರಸ್ಟ್ ಹಾಗೂ ಅಯ್ಯಪ್ಪ ಸ್ವಾಮಿ ಉತ್ಸವ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ.

RELATED ARTICLES
- Advertisment -spot_img

Most Popular