ಮಲೆನಾಡು ಭಾಗದ ಸಕಲೇಶಪುರ, ಆಲೂರು, ಬೇಲೂರು ತಾಲೂಕುಗಳ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿ ಮೀರಿರುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆಗೆ ಸರ್ಕಾರ ಮೂರು ಕಾಡಾನೆಗಳಿಗೆ ರೇಡಿಯೋ ಕಾಲರ್ ಹಾಕಲು ಅನುಮತಿ ಕೊಟ್ಟಿದ್ದು , ಈ ನಿಟ್ಟಿನಲ್ಲಿ ಕಾಡಾನೆಗಳಿಗೆ ಅರಣ್ಯ ಇಲಾಖೆ ವತಿಯಿಂದ ರೇಡಿಯೋ ಕಾಲರ್ ಹಾಕುವ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಸೋಮವಾರ ಮುಂಜಾನೆಯಿಂದಲೆ ಅಭಿಮನ್ಯು ನೇತೃತ್ವದಲ್ಲಿ ಪ್ರಶಾಂತ,ಭೀಮ,ಮಹೇಂದ್ರ, ಅಜೇಯ ಸಾಕಾನೆಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಕಾರ್ಯಚರಣೆ ಆರಂಭಿಸಲಾಯಿತು. ಕೆರೋಡಿ ಸಮೀಪದ ಬೀಡುಬಿಟ್ಟಿದ್ದ ಸುಮಾರು 10ಕ್ಕೂ ಹೆಚ್ಚು ಕಾಡಾನೆ ಗುಂಪನ್ನು ಚದುರಿಸಿ ಓಲ್ಡ್ ಬೆಲ್ಟ್ ಹೆಸರಿನ ಕಾಡಾನೆ ಸಂಚಾರದ ಕುರಿತು ಮಾಹಿತಿ ಪಡೆದು ಓಲ್ಡ್ ಬೆಲ್ಟ್ ಹೆಣ್ಣು ಕಾಡಾನೆಗೆ ಅರವಳಿಕೆ ಚುಚ್ಚು ಮದ್ದು ನೀಡುತ್ತಲೆ ಸುಮಾರು ದೂರ ಹೋಗಿ ಮಾಗಲು ಕಾಫಿ ಎಸ್ಟೇಟ್ ಮಧ್ಯೆ ಹೋಗಿ ನಿಂತಿತು. ಕೂಡಲೆ ಸುತ್ತುವರಿದ ಸಾಕಾನೆಗಳ ನೆರವಿನಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಿಷ್ಕ್ರಿಯ ವಾಗಿದ್ದ ಹಳೆಯ ರೇಡಿಯೋ ಕಾಲರ್ ತೆಗೆದು ಹೊಸ ರೇಡಿಯೋ ಕಾಲರ್ ಅಳವಡಿಸಿ ಬಳಿಕ ಕಾಡಾನೆಯನ್ನು ಅಲ್ಲಿಯೆ ಬಿಡಲಾಯಿತು. ಇದಾದ ನಂತರ ಸಕಲೇಶಪುರ ತಾಲೂಕು ಗಡಿಭಾಗದ ಬೇಲೂರು ಬ್ಯಾದನೆ ಸಮೀಪದ ಕಾಫಿ ತೋಟವೊಂದರಲ್ಲಿ ಇದ್ದ ಭುವನೇಶ್ವರಿ ಕಾಡಾನೆಗೆ ಸತತ ಕಾರ್ಯಾಚರಣೆ ನಡೆಸಿ ಕಾಲರ್ ಐಡಿ ಅಳವಡಿಸಲಾಯಿತು. ಮಂಗಳವಾರ ಹೆಬ್ಬನಹಳ್ಳಿ ಸುತ್ತಮುತ್ತ ಸಂಚರಿಸುತ್ತಿರುವ ಕಾಂತಿ ಎಂಬ ಕಾಡಾನೆಗೆ ರೇಡಿಯೋ ಕಾಲರ್ ಐಡಿ ಅಳವಡಿಸಲಾಗುತ್ತದೆ. ಈ ಸಂಧರ್ಭದಲ್ಲಿ ಡಿ.ಫ್.ಓ ಹರೀಶ್, ಎಸಿಫ್ ಸುರೇಶ್ ,ವಲಯ ಅರಣ್ಯ ಅಧಿಕಾರಿ ಶಿಲ್ಪ ,ಅರಿವಳಿಕೆ ತಜ್ಞರು ಹಾಗೂ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಉಪಸ್ಥಿತರಿದ್ದರು.