ಸಿಮೆಂಟ್ ಮಂಜು ಗೆಲುವಿನಿಂದ ಸಕಲೇಶಪುರಕ್ಕಿದ ಕಳಂಕ ತಪ್ಪಿದೆ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಭಿಪ್ರಾಯ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆಗೆ ಗಮನ ಹರಿಸುವಂತೆ ಸಲಹೆ ನೀಡಿದ ಬೊಮ್ಮಾಯಿ.
ಬೆಂಗಳೂರು : ಬಿಜೆಪಿಯ ಧೀಮಂತ ನಾಯಕ ದಿ ಬಿ. ಬಿ ಶಿವಪ್ಪನವರ ಗೆಲುವಿನ ನಂತರ ಕ್ಷೇತ್ರದಲ್ಲಿ ಕಮಲ ಅರಳಿಸಲು 20 ವರ್ಷಗಳೇ ಬೇಕಾಯಿತು ಇದರಿಂದ ಕ್ಷೇತ್ರಕ್ಕಿದ ಕಳಂಕ ದೂರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಸೋಮವಾರ ಬೆಳಿಗ್ಗೆ ನೂತನ ಶಾಸಕರಾಗಿ ಆಯ್ಕೆಯಾದ ಸಿಮೆಂಟ್ ಮಂಜುನಾಥ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ನಂತರ ಮಾತನಾಡಿದ ಬೊಮ್ಮಾಯಿ, ಇನ್ನು ಕ್ಷೇತ್ರದ ಅಭಿವೃದ್ಧಿ ಕಡೆ ಚಿಂತನೆ ನಡೆಸಿ ಮುಂಬರುವ ಲೋಕಸಭಾ ಚುನಾವಣೆಗೆ ಸಜ್ಜಾಗುವಂತೆ ಸಲಹೆ ನೀಡಿದರು. ಕಳೆದ 20 ವರ್ಷಗಳಿಂದ ಕ್ಷೇತ್ರದ ಬಿಜೆಪಿ ಗೆಲುವು ಸಾಧಿಸಿರಲಿಲ್ಲ ಇದೀಗ ಸಿಮೆಂಟ್ ಮಂಜುವಿನ ಗೆಲುವಿನಿಂದ ಕ್ಷೇತ್ರಕ್ಕೆ ಇದ್ದ ಕಳಂಕ ದೂರವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದ ಎ. ವಿ ನರೇಶ್, ಪುನೀತ್ ಬನ್ನಳ್ಳಿ, ಶರತ್ ವಿರಾಸ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.