ಸಕಲೇಶಪುರ. ತಾಲೂಕಿನ ಹಲವು ಭಾಗಗಳಲ್ಲಿ ಕಾಡನೆಗಳು ಸಂಚರಿಸುತ್ತಿದ್ದು ಚುನಾವಣೆಯಲ್ಲಿ ಗೆದ್ದಂತಹ ಅಭ್ಯರ್ಥಿಗಳ ಕಾರ್ಯಕರ್ತರು ಸಂಭ್ರಮಾಚರಣೆ ವೇಳೆ ಪಟಾಕಿ ಸಿಡಿಸದಂತೆ ಸಕಲೇಶಪುರ ಅರಣ್ಯ ವಲಯ ಅಧಿಕಾರಿ, ಶಿಲ್ಪ ಮನವಿ ಮಾಡಿದ್ದಾರೆ.
ತಾಲೂಕಿನ ಅರಣ್ಯದ ಅಂಚಿನಲ್ಲಿ ರುವ ಗ್ರಾಮಗಳು ಹಾಗೂ ಹೆಚ್ಚು ಕಾಡನೆಗಳಿರುವ ಪ್ರದೇಶಗಳಲ್ಲಿ ಚುನಾವಣೆ ಗೆಲುವಿನ ಸಂಭ್ರಮಕ್ಕೆ ಪಟಾಕಿ ಸಿಡಿಸುವ ಶಬ್ದಕ್ಕೆ ಕಾಡನೆಗಳು ಗಾಬಾರಿಗೊಂಡು ದಾಂಧಲೆ ನಡೆಸುವ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆ ಇಂದ ಇರ ಬೇಕು ಎಂದು ವಲಯ ಅರಣ್ಯ ಅಧಿಕಾರಿ ಶಿಲ್ಪರವರು ಮನವಿ ಮಾಡಿದ್ದಾರೆ ಅತಿ ಹೆಚ್ಚು ಕಾಡನೆಗಳಿರುವ ಬಿಟಾಮ್ಮ ಗ್ರೂಪ್ ನಲ್ಲಿರುವ ಕಾಡನೆಗಳು ವಿವಿಧೆಡೆ ಸಂಚರಿಸುತಿರುವದರಿಂದ ಸಾರ್ವಜನಿಕರು ಜಾಗ್ರತೆಯಿಂದ ಇರಬೆಕು ಎಂದು ತಿಳಿಸಿದ್ದಾರೆ