ಸಕಲೇಶಪುರ :- ಪಟ್ಟಣದ ಸಮೀಪವಿರುವ ಮಠಸಾಗರ ಗ್ರಾಮದಲ್ಲಿ 60ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿದ್ದು ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.
ಕಳೆದ ಒಂದು ತಿಂಗಳಿಂದ ಕಾಡಾನೆಗಳ ವಾಸಸ್ಥಾನವಾಗಿದ್ದು ಕಾಫಿ, ಭತ್ತ, ಅಡಿಕೆ ತೆಂಗು ಸೇರಿದಂತೆ ಲಕ್ಷಾಂತರ ರೂ ಗಳ ಬೆಳೆ ಕಾಡಾನೆ ಪಾಲಾಗಿದೆ.ಇನ್ನೂ ಕಾಡಾನೆಗಳು ಜನರು ವಾಸಿಸುವ ಪ್ರದೇಶಕ್ಕೂ ಲಗ್ಗೆ ಇಡುತ್ತಿದ್ದು ಇದರಿಂದ ಮಕ್ಕಳು ಮಹಿಳೆಯರು ನಿರ್ಭೀತಿಯಿಂದ ತಿರುಗಾಡಲು ಸಾಧ್ಯವಾಗುತ್ತಿಲ್ಲ.
ಸತೀಶ್ ಶೆಟ್ಟಿ ಆಕ್ರೋಶ
ಕಾಡಾನೆ ಹಾವಳಿ ಈಗೆಯೇ ಮುಂದುವರೆದರೆ ಸುತ್ತಮುತ್ತಲಿನ ಗ್ರಾಮಸ್ಥರು ಊರು ತೊರೆಯುವ ಅನಿವಾರ್ಯ ಪರಿಸ್ಥಿತಿ ಎದುರಾಗಲಿದೆ ಎಂದು ಮಳಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಸತೀಶ್ ಶೆಟ್ಟಿ ಸರಕಾರದ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಕಾಡಾನೆ ಸಮಸ್ಯೆಗೆ ಸರಕಾರ ಶೀಘ್ರವೇ ಶಾಶ್ವತ ಪರಿಹಾರ ದೊರಕಿಸಿ ಕೊಡದಿದ್ದರೆ ಶಾಸಕ ನೇತೃತ್ವದಲ್ಲಿ ಉಗ್ರ ಹೋರಾಟ ನೆಡೆಸುವ ಎಚ್ಚರಿಕೆ ನೀಡಿದ್ದಾರೆ.