ರಸ್ತೆ ಅಪಘಾತದಲ್ಲಿ ಅತ್ತೆ ಸೊಸೆ ದುರ್ಮರಣ : ಚನ್ನಗಿರಿ ಬಳಿ ರಸ್ತೆ ಅಪಘಾತದಲ್ಲಿ ಬಾಳ್ಳುಪೇಟೆ ಮೂಲದ ಇಬ್ಬರ ಸಾವು.
ಸಕಲೇಶಪುರ : ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲೂಕು ಸಮೀಪ ಕಾರು ಲಾರಿ ನಡುವೆ ಅಪಘಾತ ಸಂಭವಿಸಿ ಅತ್ತೆ ಸೊಸೆ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಬಾಳ್ಳುಪೇಟೆಯ ದಮನಗುಂಡಿಯ ಕಾಫಿ ತೋಟದ ಮಾಲೀಕರಾದ ಗುರುನಾಥ್ ಅವರ ಪತ್ನಿ ಹಾಗೂ ಸೊಸೆ ಅಮೃತಪಟ್ಟವರಾಗಿದ್ದಾರೆ.
ಅತ್ತೆ ಮೈತ್ರಿ (75) ಸೊಸೆ ಸೌಜನ್ಯ (48) ಮೃತಪಟ್ಟಿರುವ ದುರ್ದೈವಿಗಳು.
ಹಾಸನದ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಮಲೆನಾಡು ಇಂಜಿನಿಯರಿಂಗ್ ಎಂಸಿಎ ಕಾಲೇಜಿನ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸೌಜನ್ಯ ಹಾಗೂ ಗುರುನಾಥ್ ಅವರ ಪತ್ನಿ ಮೈತ್ರಿ ಸೇರಿದಂತೆ ನಾಲ್ವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಲಾರಿ ಚಾಲಕನ ಅಜಾಗ್ರತೆಯಿಂದ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದು ಇನ್ನಿಬ್ಬರು ಗಂಭೀರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರ ಅಂತ್ಯಕ್ರಿಯೆಯು ಸ್ವಗ್ರಾಮ ಬಾಳ್ಳುಪೇಟೆಯಲ್ಲಿ ಇಂದು ನೆರವೇರಲಿದೆ.