ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಅರೋಗ್ಯ ಇಲಾಖೆಯ ಅರೋಗ್ಯ ರಕ್ಷಕ 108 ಮುಂಜಾಗ್ರತೆ ಕ್ರಮವಾಗಿ ತಯಾರಿ
ಹಾಸನ ಜಿಲ್ಲೆ :ನಾಳೆ ನೆಡೆಯುವ ವಿಧಾನಸಭಾ ಮತದಾನ ಹಿನ್ನೆಲೆ ಯಲ್ಲಿ ಎಲ್ಲಾ ಇಲಾಖೆ ಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತಿದ್ದು. ಮತದಾನ ನೆಡೆಯುವ ವೇಳೆಯಲ್ಲಿ ಮತದಾರರ ಅರೋಗ್ಯದ ಹಿತ ದೃಷ್ಟಿಯಿಂದ ಹಾಸನ ಜಿಲ್ಲೆಯ 108 ಅರೋಗ್ಯ ಕವಚ ಅಡಿಯಲ್ಲಿ ಬರುವಂತ ಎಲ್ಲಾ ಆಂಬುಲೆನ್ಸ್ ವಾಹನಗಳು ಹಾಸನ ಜಿಲ್ಲೆ ಹಾಗೂ ತಾಲೋಕುಗಳಲ್ಲು ಮುಂಜಾಗ್ರತವಾಗಿ ಕಾರ್ಯನಿರ್ವಾಹಿಸಲು ಸಜ್ಜಾಗಿದೆ. ಹಾಗೂ ಬೇಕಾದ ಎಲ್ಲಾ ರೀತಿಯ ಸೂಕ್ತ ಸಲಕರಣೆಗಳನ್ನು ತಯಾರಿ ಮಾಡಿಕೊಂಡಿದ್ದು ಯಾವುದೇ ಸಮಯದಲ್ಲಿ ಅಹಿಕರ ಘಟನೆ ನಡೆಯದ ಹಾಗೆ ಮುಂಜಾಗ್ರತವಾಗಿ ಎಲ್ಲಾ ಆಂಬುಲೆನ್ಸ್ ಗಳನ್ನು ತಯಾರಿ ಮಾಡಿ ಕೊಳ್ಳಲಾಗಿದೆ ಎಂದು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತಿರುವ.
ಇ ಎಮ್ ಆರ್ ಐ ಗ್ರೀನ್ ಹೆಲ್ತ್ ಸರ್ವಿಸಸ್ ಕಂಪನಿ ಯವರು ಪತ್ರಿಕೆಗೆ ತಿಳಿಸಿದ್ದಾರೆ
ರಾಜ್ಯದಲ್ಲಿ ಉತ್ತಮ ಸೇವೆ ನೀಡುವ ಸಲುವಾಗಿ ಆಂಬುಲೆನ್ಸ್ ಗಳನ್ನು 2023ರ ಚುನಾವಣೆ ನೆಡೆಯುವ ದಿನ ಹಾಗೂ ಮತ ಏಣಿಕೆಯ ದಿನ
ನಿಯೋಜಿಸಿದ್ದು ಸಾರ್ವಜನಿಕರು ಯಾವುದೇ ತೊಂದರೆಗೆ ಇಡಾಗಿದ್ದಲ್ಲಿ ತಕ್ಷಣವೇ ಅರೋಗ್ಯ ಕವಚ 108 ಉಚಿತ ಕರೆಗೆ ಕರೆ ಮಾಡಿ ಆಂಬುಲೆನ್ಸ್ ಸೇವೆ ಯನ್ನು ಪಡೆದುಕೊಳ್ಳಬೇಕೆಂದು ತಿಳಿಸಿದೆ