Friday, November 22, 2024
Homeಸುದ್ದಿಗಳುಸಕಲೇಶಪುರಸತತ ಎರಡನೇ ದಿನವೂ ಮತ ಬೇಟೆಗೆ ಇಳಿದ ಶಾಸಕ ಎಚ್ ಕೆ ಕುಮಾರಸ್ವಾಮಿ

ಸತತ ಎರಡನೇ ದಿನವೂ ಮತ ಬೇಟೆಗೆ ಇಳಿದ ಶಾಸಕ ಎಚ್ ಕೆ ಕುಮಾರಸ್ವಾಮಿ

ಸಕಲೇಶಪುರ ಅಲೂರು ಕಟ್ಟಾಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾಸಕ ಎಚ್.ಕೆ ಕುಮಾರಸ್ವಾಮಿ ಪಟ್ಟಣ ಪುರಸಭೆಯ ವ್ಯಾಪ್ತಿಯ ವಿವಿಧ ಬಡಾವಣೆಗಳಿಗೆ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ಸತತ ಎರಡನೇ ದಿನವೂ ಮನೆ-ಮನೆಗೆ ತೆರಳಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಚ್. ಕೆ ಕುಮಾರಸ್ವಾಮಿ ಪಕ್ಷದ ಕಾರ್ಯಕ್ರಮಗಳನ್ನು ಮನೆಯ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಇಂದು ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದೇನೆ. ಕಳೆದ ಮೂರು ಬಾರಿಯೂ ಕ್ಷೇತ್ರದ ಜನ ನನಗೆ ಆಶೀರ್ವಾದ ನೀಡಿದ್ದಾರೆ ನಾಲ್ಕನೇ ಬಾರಿಗೂ ಪಕ್ಷದ ವರಿಷ್ಠರು ವಿಶ್ವಾಸ ಇಟ್ಟು ಘೋಷಣೆ ಮಾಡಿದ್ದಾರೆ. ತಳಕು ಬಳಸುವ ರಾಜಕೀಯ ನನಗೆ ಗೊತ್ತಿಲ್ಲ. ನನಗೆ ಗೊತ್ತಿರುವುದು ಈ ಕ್ಷೇತ್ರದ ಜನತೆ ಮಾತ್ರ ಕ್ಷೇತ್ರದ ಜನತೆಯ ಆಶೀರ್ವಾದ ನನ್ನ ಮೇಲೆ ಎಲ್ಲಿಯವರೆಗೂ ಇರುತ್ತದೆಯೊ, ಆ ಕ್ಷಣದವರೆಗೂ ನನ್ನ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಪಟ್ಟಣ ವ್ಯಾಪ್ತಿಯಲ್ಲಿ ಕೆಲವು ತಾಂತ್ರಿಕ ಕಾರಣಗಳಿಂದಾಗಿ ವಸತಿ ರ ಹಿತರಿಗೆ ನಿವೇಶನ ,ಕಸ ವಿಲೇವರಿ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಿರುವುದಿಲ್ಲ ಹಾಗೂ ಪಟ್ಟದ ವ್ಯಾಪ್ತಿಯ ಬಹುತೇಕ ಎಲ್ಲಾ ಬಡಾವಣೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು ಕೆಲವು ಭಾಗಗಳಲ್ಲಿ ಇನ್ನಷ್ಟು ಕೆಲಸಗಳು ಬಾಕಿ ಇರುವುದು ನನ್ನ ಗಮನದಲ್ಲಿದೆ. ಪಟ್ಟಣ ಅಭಿವೃದ್ಧಿಗೆ ಸುಮಾರು ಎಂಟು ಕೋಟಿಗಳನ್ನು ಮೀಸಲಿಟ್ಟಿದ್ದೇನೆ. ಚುನಾವಣೆಯ ಸಂದರ್ಭದಲ್ಲಿ  ಕಾಮಗಾರಿಯು ಕುಂಠಿತಗೊಂಡಿದೆ ,ಚುನಾವಣೆಯ ನಂತರ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು
ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ದೊಡ್ಡದೀಣೆ ಸ್ವಾಮಿಯವರು ಮಾತನಾಡಿ ಕ್ಷೇತ್ರದಲ್ಲಿ ನಮ್ಮ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ತಾಲೂಕಿನ ಯಸಳೂರು, ಹಾನುಬಾಳು, ಹೆತ್ತೂರು, ಆಲೂರು ತಾಲೂಕು ಹಾಗೂ ಕಟ್ಟಾಯ ಭಾಗದಲ್ಲಿ ಪಕ್ಷವು ಸದೃಢವಾಗಿದೆ ಎಂದು ಹೇಳಿದರು.
  ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷರಾದ ಕಾಡಪ್ಪ,ಉಪಾಧ್ಯಕ್ಷೆ  ಸರಿತಾ, ಸದಸ್ಯರುಗಳಾದ  ಆದರ್ಶ್, ಯಾದ್ಗಾರ್ ಇಬ್ರಾಹಿಂ, ಮುಖೇಶ್ ಶೆಟ್ಟಿ ,ಸಮೀರ್, ಉಮೇಶ್, ವರಮಾಹಲಕ್ಷ್ಮಿ, ಮೋಹನ್, ಜರೀನಾ, ಜ್ಯೋತಿ, ಮುಖಂಡರಾದ ಸಚಿನ್ ಪ್ರಸಾದ್, ಹಸೈನಾರ್ ಇದ್ದರು.
RELATED ARTICLES
- Advertisment -spot_img

Most Popular