Homeಸುದ್ದಿಗಳುಮೂರು ಕಣ್ಣು ಗುಡ್ಡ ರಕ್ಷಿತ ಅರಣ್ಯ ಪ್ರದೇಶದೊಳಗೆ ಆಕ್ರಮ ವಾಹನ ಸಫಾರಿ ಸ್ಟೊನ್ ವ್ಯಾಲಿ...
ಮೂರು ಕಣ್ಣು ಗುಡ್ಡ ರಕ್ಷಿತ ಅರಣ್ಯ ಪ್ರದೇಶದೊಳಗೆ ಆಕ್ರಮ ವಾಹನ ಸಫಾರಿ ಸ್ಟೊನ್ ವ್ಯಾಲಿ ರೆಸಾರ್ಟ್ ನ ಜೀಪು ವಶ
- ಸಕಲೇಶಪುರ; ಮೂರು ಕಣ್ಣು ಗುಡ್ಡ ರಕ್ಷಿತ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರು ಸಫಾರಿ ಮಾಡುತಿದ್ದ ವಾಹನ ವಶಪಡೆದು ಸ್ವೂನ್ ವ್ಯಾಲಿ ರೇಸಾರ್ಟನ ಮಾಲಿಕರ ಮೇಲೆ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ತಾಲ್ಲೊಕಿನ ಹಾನುಬಾಳ್ ಹೊಬಳಿ ಮೂರು ಕಣ್ಣು ಗುಡ್ಡ ರಕ್ಷಿತ ಅರಣ್ಯ ಸೆಕ್ಷನ್ 4 ಅರಣ್ಯ ಪ್ರದೇಶದ ಅಚ್ಚನಹಳ್ಲಿ ಗ್ರಾಮದ ಸರ್ವೆ ನಂ 93 ರಲ್ಲಿ ಸ್ಟೊನ್ ವ್ಯಾಲಿ ರೆಸಾರ್ಟನ ವಾಹನದಲ್ಲಿ ಪ್ರವಾಸಿಗರು ಆಕ್ರಮವಾಗಿ ರಕ್ಷಿತಾ ಅರಣ್ಯ ಪ್ರವೇಶಿಸಿ ಮೊಜು ಮಸ್ತಿ ಮಾಡುತಿದ್ದರು ಇದರ ಖಚಿತ ಮಾಹಿತಿ ಪಡೆದು ಸೊಮವಾರ ಬೆಳಿಗ್ಗೆ ವಲಯ ಅರಣ್ಯ ಅಧಿಕಾರಿ ಶಿಲ್ಪರವರು ಅರಣ್ಯ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತರಳಿದಾಗ ತಕ್ಷಣ ಜೀಪ ಚಾಲಕ ಜೀಪನ್ನು ಬಿಟ್ಟು ಪರಾರಿಯಾಗಿದ್ದಾನೆ. ನಂತರ ಅರಣ್ಯ ಪ್ರದೇಶದೊಳಗಿದ್ದ ಜೀಪನ್ನು ವಶ ಪಡಿಸಿಕೊಂಡಿದ್ದಾರೆ. ವಾಣಿಜ್ಯ ಉದ್ದೇಶಕ್ಕೆ ಪ್ರವಾಸಿಗರನ್ನು ರಕ್ಷಿತಾ ಅರಣ್ಯ ಪ್ರದೇಶದೊಳಗೆ ವಾಹನದಲ್ಲಿ ಸಫಾರಿ ಕರೆದುಕೊಂಡು ಹೊಗುತಿದ್ದರಿಂದ ಸ್ಟೋನ್ ವ್ಯಾಲಿ ರೆಸಾರ್ಟ ಮಾಲಿಕ ಸುಭಾಷ್ ಸ್ಟಿಫನ್ ಹಾಗೂ ಚಾಲಕನ ಮೇಲೆ ಕರ್ನಾಟಕ ಅರಣ್ಯ ಕಾಯ್ದೆ1960 ಹಾಗೂ ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ 24,62,104 ಇನ್ನಿತರ ಪ್ರಕರಣ ದಾಖಲಿಸಲಾಗಿದೆ.
ಈ ಪ್ರದೇಶದಲ್ಲಿ ರೆಸಾರ್ಟ ಮಾಲಿಕರು ಈ ಹಿಂದೆಯೂ ಸಹ ಆಕ್ರಮವಾಗಿ ರಸ್ತೆ ನಿರ್ಮಿಸಿದ್ದರು ಅರಣ್ಯ ಇಲಾಖೆಯವರು ಈ ಪ್ರದೇಶದಲ್ಲಿ ಯಾವುದೆ ರೀತಿಯ ಆಕ್ರಮ ಕಾಮಗಾರಿ ಮಾಡದಂತೆ ನೋಟಿಸ್ ನೀಡಿ ಪ್ರಕರಣ ದಾಖಲಿಸಿ ಈ ಆಕ್ರಮ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಪದೇ ಪದೇ ರೆಸಾರ್ಟ ಮಾಲಿಕರು ರಜೆ ಸಂಧರ್ಭದಲ್ಲಿ ವಾಣಿಜ್ಯ ಉದ್ದೇಶಕ್ಕೆ ಪ್ರವಾಸಿಗರನ್ನು ರಕ್ಷಿತಾ ಅರಣ್ಯ ಪ್ರದೇಶದೊಳಗೆ ಸಫಾರಿಗೆ ಟ್ರಕಿಂಗ್ ಗೆ ಕರೆದು ಕೊಂಡು ಹೊಗುವುದು ದಿನೆ ದಿನೆ ಹೆಚ್ಚುತಿದ್ದರಿಂದ ಉಪಅರಣ್ಯ ಸಂರಕ್ಷಣಾ ಅಧಿಕಾರಿ ಸುರೆಶ ರವರ ಮಾರ್ಗದರ್ಶನದಲ್ಲಿ ಈ ಕಾರ್ಯಚರಣೆ ನಡೆಸಲಾಹಿದೆ ಈ ಸಂಧರ್ಭದಲ್ಲಿ ಅರಣ್ಯ ಅಧಿಕಾರಿ ಶಿಲ್ಪ ರವರು ಅರಣ್ಯ ಸಿಬ್ಬಂದಿಗಳಾದ ಮಾಹದೇವ್ ,ಹನುಮಂತು ,ಲೋತಕೆಶ್ ಯೊಗೇಶ್ ರಮೇಶ್ ಸುನಿಲ್ ಹಾಗೂ ಚಾಲಕ ಚಿದಾನಂದ ಮುಂತಾದವರು ಪಾಲ್ಗೊಂಡಿದ್ದರು.
- Advertisment -