ಮಲೆನಾಡು ರಕ್ಷಣಾ ಸೇನೆಯ ಸುಳ್ಳಕ್ಕಿ ಘಟಕ ಉದ್ಘಾಟನೆ
ನೂತನ ಅಧ್ಯಕ್ಷರಾಗಿ ಮಿಥುನ್ ನೇಮಕ ಮಾಡಿ ಆದೇಶ ಹೊರಡಿಸಿದ ರಾಜ್ಯಾಧ್ಯಕ್ಷ ಸಾಗರ್ ಜಾನೇಕೆರೆ
ಸಕಲೇಶಪುರ : ಮಲೆನಾಡು ಭಾಗದ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಿ ನಿಂತಿರುವ ಮಲೆನಾಡು ರಕ್ಷಣಾ ಸೇನೆ ತನ್ನ ಘಟಕಗಳನ್ನು ವಿಸ್ತರಿಸುವ ಕಾರ್ಯಕ್ಕೆ ಮುಂದಾಗಿದೆ.
ಈ ನಿಟ್ಟಿನಲ್ಲಿ ಸಕಲೇಶಪುರ ತಾಲೂಕು ಸುಳ್ಳಕ್ಕಿ ಭಾಗದ ಘಟಕವನ್ನು ಮಂಗಳವಾರ ರಾಜ್ಯಾಧ್ಯಕ್ಷ ಸಾಗರ್ ಜಾನೇಕೆರೆ ಮಾರ್ಗದರ್ಶನದಲ್ಲಿ ಉದ್ಘಾಟನೆ ಮಾಡಲಾಯಿತು.
ತಾಲೂಕು ಅಧ್ಯಕ್ಷ ಸತೀಶ್ (ಬೋಲ್ಟ್ ) ನೇತ್ರತ್ವದ ತಾಲೂಕು ಪದಾಧಿಕಾರಿಗಳ ಸಂಘ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಮಿಥುನ್ ಅವರನ್ನು ಸುಳ್ಳಕ್ಕಿ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಈ ಸಂದರ್ಭದಲ್ಲಿ ಸಂಘಟನೆಯ ತಾಲ್ಲೂಕು ಉಪಾಧ್ಯಕ್ಷರು ತೇಜೆಸ್ ತಾಲ್ಲೂಕು ಉಸ್ತುವಾರಿ ಚಂದ್ರಶೇಖರ್, ನೂತನ ಸಂಘಟನೆಯ ಉಪಾಧ್ಯಕ್ಷರು ಅಭಿ ಉಸ್ತುವಾರಿ ಪುನೀತ್,ಖಜಾಂಚಿ ರಮೇಶ್ ಸಂಚಾಲಕರು. ಶಶಿ, ಆಪ್ಪು, ವಿಕಿ,.ದೇವರಾಜ್,ಮೋಹನ್ ಮೆಗಲಕೆರೆ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು,ಕಾರ್ಯಕರ್ತರು,ಗ್ರಾಮಸ್ಥರು ಉಪಸ್ಥಿತರಿದ್ದರು.