ಸೆಕ್ಷನ್ 4 ವಿಚಾರದಲ್ಲಿ ಅರಣ್ಯ ಇಲಾಖೆ ಕಿರುಕುಳ ನೀಡದಂತೆ ಮಲೆನಾಡು ರಕ್ಷಣಾ ಸೇನೆ ಅಗ್ರಹ
ಸಿ.ಟಿ ರವಿ ಹಾಗೂ ಅರಣ್ಯ ಇಲಾಖೆಗೆ ಮನವಿ.
ಸ್ಥಳದಿಂದ ತಕ್ಷಣದಿಂದಲ್ಲೇ ಜೆಸಿಬಿ ತೆರವುಗಿಳಿಸುವಂತೆ ಎಸಿಎಫ್ ಸೂಚನೆ.
ಸಕಲೇಶಪುರ: ಅರಣ್ಯ ಇಲಾಖೆಯವರು ಸೆಕ್ಷನ್ 4 ಹೆಸರಿನಲ್ಲಿ ಸಕಲೇಶಪುರ ತಾಲ್ಲೂಕು, ಹಾನುಬಾಳು ಹೋಬಳಿ, ಆ ಎಂಟು ಗ್ರಾಮಗಳಿಗೆ ನೀಡುತ್ತಿರುವ ಕಿರುಕುಳವನ್ನು ನಿಲ್ಲಿಸಬೇಕೆಂದು ಅರಣ್ಯ ಇಲಾಖೆಗೆ ಮಲೆನಾಡು ರಕ್ಷಣಾ ಸೇನೆ ವತಿಯಿಂದ ಮನವಿ ನೀಡಲಾಯಿತು.
ಸಂಘಟನೆಯ ರಾಜ್ಯಾದ್ಯಕ್ಷ ಸಾಗರ್ ಜಾನೆಕೆರೆ ನೇತ್ರತ್ವದಲ್ಲಿ ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮತ್ತು ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಸಕಲೇಶಪುರ ತಾಲ್ಲೂಕು, ಹಾನುಬಾಳ್ ಹೋಬಳಿಯ ಗ್ರಾಮಗಳಾದ ಅಗ್ನಿ,, ಅಚ್ಚನಹಳ್ಳಿ ಜಂಬರಡಿ, ನಡಹಳ್ಳಿ, ಕಾಡುಮನೆ, ಮಂಚೇನಹಳ್ಳಿ ಎಸ್ಟೇಟ್, ಕುಮಾರಹಳ್ಳಿ, ಕಾಮನಹಳ್ಳಿ, ಮುಂತಾದ ಗ್ರಾಮಗಳಲ್ಲಿ ಸಾವಿರಾರು ಕುಟುಂಬಗಳು, ನೂರಾರು ವರ್ಷಗಳಿಂದ ಕೃಷಿ ಚಟುವಟಕಗಳನ್ನು ನಡೆಸಿ ಜೀವನ ನಡೆಸಿಕೊಂಡು ಬಂದಿರುತ್ತಾರೆ
1920 ರಲ್ಲಿ ಮೈಸೂರು ಮಹರಾಜರು ಸೆಕ್ಷನ್ 4 ಮೂಲಕ ಈ ಎಲ್ಲಾ ಗ್ರಾಮಗಳ ಸುಮಾರು 8000 ಎಕರೆ ಜಮೀನನ್ನು ರಿಸರ್ವ್ ಪಾರೆಸ್ಟ್ ಮಾಡಲು ನೋಟಿಪಿಕೆಷನ್ ಮಾಡಲು ಹೊರಡಿಸಿ, ತದನಂತರ 1923 ರಲ್ಲಿ ಈ ಜಾಗವೂ ರಿಸರ್ವ್ ಫಾರೆಸ್ಟ್ ಮಾಡಲು ಯೋಗ್ಯವಲ್ಲವೆಂದು ಪರಿಗಣಿಸಿ ಹೊರಡಿಸಿದ ಸೆಕ್ಷನ್ 4 ನ್ನು ರದ್ದುಗೊಳಿಸಿರುತ್ತಾರೆ. ಆದರೆ ಅರಣ್ಯ ಇಲಾಖೆಯವರು 1923 ರ ಆದೇಶವನ್ನು ಮುಚ್ಚಿಟ್ಟುಕೊಂಡು ಈ 8 ಗ್ರಾಮದ ಜನರನ್ನು ಒಕ್ಕಲೆಬ್ಬಿಸಲು ಹಲವು ಜನ ವಿರೋಧಿ ನಿಯಮಗಳನ್ನು ರೂಪಿಸಿಕೊಂಡಿರುತ್ತಾರೆ.
ಹಿಡುವಳಿ ಜಾಗಗಳಿಗೆ ಹೊಗುವ ರಸ್ತೆಯನ್ನು ರಿಪೇರಿ ಮಾಡಲು ತಡೆ ಒಡ್ಡುತ್ತಾರೆ ಹಾಗೂ ಕಟ್ಟಿದ ಮನೆಗಳ ದುರಸ್ತಿ ಕಾರ್ಯಗಳನ್ನು ಮಾಡಲು ಅಡ್ಡಿ ಪಡಿಸುತ್ತಾರೆ. ಕೃಷಿ ಚಟುವಟಕೆಗಳಿಗೆ ಹಾಗೂ ಜಾನುವಾರುಗಳ ಮೇವಿಗೆ ಹೋದರೆ ತೊಂದರೆ ಕೊಡುತ್ತಾರೆ.
ಅವೈಜ್ಞಾನಿಕವಾಗಿ ಈ ಭಾಗದಲ್ಲಿರುವ ಶೋಲಾ ಬೆಟ್ಟದಲ್ಲಿ ಯಂತ್ರಗಳಿಂದ ರಸ್ತೆಗಳನ್ನು ನಿರ್ಮಿಸಿರುವುದರಿಂದ ಮಳೆಗಾಲದಲ್ಲಿ ಗುಡ್ಡ ಜರುಗುವ ಆತಂಕವು ಎದುರಾಗಿದೆ. ಆದ್ದರಿಂದ ಮೂರುಕಣ್ಣು ಗುಡ್ಡ ಹಾಗೂ ಕಾಡುಮನೆಯಲ್ಲಿ ಜೆ.ಪಿ.ಬಿ ಯಂತ್ರದಿಂದ ರಸ್ತೆ ನಿರ್ಮಿಸುವ ಕಾಮಗಾರಿಯನ್ನು ತಕ್ಷಣ ನಿಲ್ಲಸಬೇಕಾಗಿರುತ್ತೆ. ಪ್ರತಿ ವರ್ಷ ಗುಡ್ಡದ ಮೇಲೆ ಗಿಡ ನೆಡುವ ಹೆಸರಿನಲ್ಲಿ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ನಷ್ಟ ಉಂಟು ಮಾಡಿರುತ್ತಾರೆ. ಪ್ರತಿ ವರ್ಷ ನೆಟ್ಟಿರುವ ಯಾವುದೇ ಗಿಡ ಮರಗಳು ಇಲ್ಲಿಯ ವರೆಗೆ ಬೆಳೆದಿರುವುದಿಲ್ಲ. ಆರ್.ಟಿ.ಐ ಅಡಿಯಲ್ಲಿ ಇದರ ಬಗ್ಗೆ ಮಾಹಿತಿ ಕೇಳಿದರೆ ಯಾವುದೇ ಅಧಿಕಾರಿಗಳು ಈ ವರೆಗೆ ಯಾವುದೇ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಿರುವುದಿಲ್ಲ ಎಂದು ಆರೋಪಿಸಿದರು.
ಸಂಘಟನೆಯ ಮನವಿ ಮೇರೆಗೆ ಮೂರುಕಣ್ಣು ಗುಡ್ಡ ಹಾಗೂ ಕಾಡುಮನೆ ವ್ಯಾಪ್ತಿಯಲ್ಲಿ ಜೆಸಿಬಿ ಯಂತ್ರದ ಮೂಲಕ ನೆಡೆಸುತ್ತಿದ್ದ ಕಾಮಗಾರಿಯನ್ನು ತಕ್ಷಣದಿಂದಲ್ಲೇ ನಿಲ್ಲಿಸಿ ಸ್ಥಳದಿಂದ ಜೆಸಿಬಿ ಯಂತ್ರವನ್ನು ತರೆವುಗೊಳಿಸಲಾಗುವುದು.
ಸುರೇಶ್,ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಕಲೇಶಪುರ
ಈ ಸಂದರ್ಭದಲ್ಲಿ ವೈಲ್ಡ್ ವಾಗತೈಲ್ ರೆಸಾರ್ಟ್ ಮಾಲೀಕರಾದ ಹಾನುಬಾಳು ಹರೀಶ್, ಸುಧೀರ್ ಹುರುಡಿ, ಅಗ್ನಿ ಶಿವಕುಮಾರ್, ಸ್ಟೋನ್ ವ್ಯಾಲಿ ರೆಸಾರ್ಟ್ ಮಾಲೀಕರಾದ ಸುಭಾಷ್,ಶಂಭು,ಮಂಜುನಾಥ್ ಅಗನಿ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.