ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ವೀರಶೈವ ಯುವ ಮುಖಂಡ
ಬಿಜೆಪಿಯತ್ತ ಲೋಹಿತ್ ಕೌಡಹಳ್ಳಿ?
ಸಕಲೇಶಪುರ: ಒಂದೆಡೆ ಕಾಂಗ್ರೆಸ್ ಮುಖಂಡರು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರನ್ನು ಸೆಳೆಯುತ್ತಿದ್ದು ಮತ್ತೊಂದೆಡೆ ಕಾಂಗ್ರೆಸ್ ಪಕ್ಷದಲ್ಲಿದ್ದ ಪ್ರಬಲ ವೀರಶೈವ ಮುಖಂಡ ಲೋಹಿತ್ ಕೌಡಹಳ್ಳಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದು ಇದರಿಂದಾಗಿ ಪಕ್ಷಕ್ಕೆ ತೀವ್ರ ಪೆಟ್ಟು ಬೀಳುವ ಸಾಧ್ಯತೆಯಿದೆ.
ಈ ಕುರಿತು ವಾಸ್ತವ ನ್ಯೂಸ್ ನೊಂದಿಗೆ ಮಾತನಾಡಿದ ಲೋಹಿತ್ ಕೌಡಹಳ್ಳಿ ಪಕ್ಷದ ಅಭ್ಯರ್ಥಿಯ ಧೋರಣೆಯಿಂದ ಬೇಸತ್ತು ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದು ಸುಮಾರು 30ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್ ತೊರೆಯುತ್ತಿದ್ದು ಇನ್ನೆರಡು ದಿನಗಳಲ್ಲಿ ಯಾವ ಪಕ್ಷ ಸೇರುವುದೆಂದು ಕಾರ್ಯಕರ್ತರ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಇದರೊಂದಿಗೆ ಆಪರೇಷನ್ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್ ಸ್ವತಃ ಆಪರೇಷನ್ ಗೆ ಒಳಗಾಗಿದೆ.