Sunday, April 20, 2025
Homeಸುದ್ದಿಗಳುಸಕಲೇಶಪುರಮಾಜಿ ಜಿ.ಪಂ ಸದಸ್ಯ ಪರ್ವತಯ್ಯ ಕಾಂಗ್ರೆಸ್ ಸೇರ್ಪಡೆ

ಮಾಜಿ ಜಿ.ಪಂ ಸದಸ್ಯ ಪರ್ವತಯ್ಯ ಕಾಂಗ್ರೆಸ್ ಸೇರ್ಪಡೆ

ಬ್ರೇಕಿಂಗ್ ನ್ಯೂಸ್

ಬಿಜೆಪಿಗೆ ಅಘಾತ: ಮಾಜಿ ಜಿ.ಪಂ ಸದಸ್ಯ ಪರ್ವತಯ್ಯ ಕಾಂಗ್ರೆಸ್ ಸೇರ್ಪಡೆ

ಸಕಲೇಶಪುರ: ಮಾಜಿ ಜಿ.ಪಂ ಸದಸ್ಯ ಪರ್ವತಯ್ಯ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿರುವುದು ಕಂಡು ಬಂದಿದೆ.

  ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ರವರ ಬಲಗೈ ಬಂಟನಂತಿದ್ದ ಮಾಜಿ ಜಿ.ಪಂ ಸದಸ್ಯ ಪರ್ವತಯ್ಯ ಬಿಜೆಪಿ ತೊರೆದು  ಕಾಂಗ್ರೆಸ್ ಅಭ್ಯರ್ಥಿ ಮುರುಳಿಮೋಹನ್ ಹಾಗೂ ಬೈರಮುಡಿ ಚಂದ್ರು ಸಮ್ಮುಖದಲ್ಲಿ ಜೆಡಿಎಸ್, ಬಿಜೆಪಿ ಹಾಗೂ ಬಿ.ಎಸ್.ಪಿ ಯ ಸುಮಾರು 50ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.ಸುಮಾರು ಒಂದು ವಾರದ ಹಿಂದೆಯೆ ಪರ್ವತಯ್ಯನವರು ಕಾಂಗ್ರೆಸ್ ಸೇರ್ಪಡೆಯಾಗಿದ್ದು ಇಂದು ಪರ್ವತಯ್ಯನವರ ಮನೆಯಲ್ಲಿ ನಡೆದ ಅವರ ಹುಟ್ಟುಹಬ್ಬದ ಆಚರಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುರುಳಿಮೋಹನ್ , ತಾಲೂಕು ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ಚಂದ್ರು ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರುಗಳು ಪರ್ವತಯ್ಯನವರಿಗೆ ಶುಭ ಕೋರುವುದರ ಜೊತೆಗೆ ಮುಂದಿನ ರಾಜಕೀಯ ಕಾರ್ಯತಂತ್ರ ರೂಪಿಸಿದ್ದಾರೆಂದು ತಿಳಿದು ಬಂದಿದೆ.

ಹೇಳಿಕೆ: ಪರ್ವತಯ್ಯ: ಬಿಜೆಪಿಯಲ್ಲಿ ನನ್ನನ್ನು ನಿರ್ಲಕ್ಷ್ಯ ಮಾಡಿದರು ಹಾಗೂ ಪ್ರೀತಮ್ ಗೌಡರವರ ರಾಜಕೀಯ ಶೈಲಿ ನನಗೆ ಹಿಡಿಸದ ಕಾರಣ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. ಕ್ಷೇತ್ರದ ಶಾಸಕರು ಇನ್ನು ಇಲ್ಲಿ ಮನೆ ಮಾಡಿಲ್ಲ ಆದರೆ ಮುರುಳಿಮೋಹನ್ ಕ್ಷೇತ್ರದಲ್ಲಿ ಮನೆ ಕಟ್ಟುತ್ತಿದ್ದಾರೆ. ಸ್ಥಳೀಯ ದಲಿತರು ಬಹುತೇಕರು ಕಾಂಗ್ರೆಸ್ ನಲ್ಲಿದ್ದು ಅವರ ಒತ್ತಾಸೆಯಂತೆ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ.

RELATED ARTICLES
- Advertisment -spot_img

Most Popular