ಸಕಲೇಶಪುರ :ತಾಲ್ಲೂಕಿನ ಯಸಳೂರು ಹೋಬಳಿಯ ಕರಗೂರು ಗ್ರಾಮದ ಇತಿಹಾಸ ಪ್ರಸಿದ್ದವಾದ ಶ್ರೀ ದೇವಿರಮ್ಮ ದೇವಿಯ ಅದ್ದೂರಿ ಸುಗ್ಗಿ ಉತ್ಸವ ಕಾರ್ಯಕ್ರಮ ಗುರುವಾರ ಸಾರು ಹಾಕುವ ಮೂಲಕ ಗ್ರಾಮದಲ್ಲಿ ಹಬ್ಬದ ವಾತಾವರಣ ಕಾಣ ತೊಡಗಿದೆ.
ಅಕ್ಕಪಕ್ಕದ ಗ್ರಾಮಗಳಾದ ಪಾಲಹಳ್ಳಿ , ಆಡ್ರಹಳ್ಳಿ , ಹಳ್ಳಿಯೂರು ಸೇರಿದಂತೆ ಸುತ್ತಮೂತ್ತಲಿನ ಸಾವಿರಾರು ಭಕ್ತರು ಈ ಉತ್ಸವದಲ್ಲಿ ಭಾಗವಹಿಸಲಿದ್ದು ಉತ್ಸವ ವಿಜ್ರಂ‘ಣೆಯಿಂದ ನೆಡೆಯಲಿದೆ .
ಶುಕ್ರವಾರ ಹೊನ್ನಾರು ಸುಗ್ಗಿ , ಶನಿವಾರ ರಾತ್ರಿಪೂರ ಬಿಲ್ಲುಸುಗ್ಗಿ ನಡೆಯುತ್ತದೆ.ಭಾನುವಾರ ಮಡೆಬನದಲ್ಲಿ ಮಡಿವಂತಿಕೆಯಿಂದ ದೇವರಿಗೆ ನೈವೆದ್ಯ ಮಾಡಲಾಗುತ್ತದೆ. ಸೋಮವಾರ ಬೆಳಿಗ್ಗೆ ದೇವಿಗೆ ಮಲ್ಲು ಬೆಳಗುವ ಮೂಲಕ ಯುವಕರು ಸಂಭ್ರಮ ಆಚರಿಸುತ್ತಾರೆ. ಅದೆ ದಿನ ಮಧ್ಯಾಹ್ನ ನಂತರ ಹಗಲು ಸುಗ್ಗಿ ನಡೆಯುತ್ತದೆ . ತಿಂಡಿ ತಿನಿಸು ವ್ಯಾಪಾರದೊಂದಿಗೆ ಜಾತ್ರೆಯ ರಂಗು ಎಲ್ಲೆಡೆ ಕಾಣ ಸಿಗುತ್ತದೆ. ಸುಗ್ಗಿ ಉತ್ಸವಕ್ಕೆ ಹೆಚ್ಚಿನ ಭಕ್ತಾಧಿಗಳು ಆಗಮಿಸುವಂತೆ ಸಮಾಜ ಸೇವಕ ಮಲ್ನಾಡ್ ಚಂದ್ರು , ಸೇವಾ ಸಮಿತಿಯ ಸದಸ್ಯರುಗಳು ಹಾಗೂ ಕರಗೂರಿನ ಗ್ರಾಮಸ್ಥರು ಮನವಿ ಮಾಡಿದ್ದಾರೆ.