ಸಕಲೇಶಪುರ : ಹೇಮಾವತಿ ಸೇತುವೆ ಬಳಿ ಅಪರಿಚಿತ ಶವ ಪತ್ತೆ
ಪಟ್ಟಣದ ಹೇಮಾವತಿ ನದಿಯ ಸೇತುವೆ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿರುವ ಘಟನೆ ನೆಡೆದಿದೆ.
ಶನಿವಾರ ಮಧ್ಯಾಹ್ನ ಅಪರಿಚಿತ ವ್ಯಕ್ತಿಯ ಶವ ನದಿಯಲ್ಲಿ ತೆಲುತ್ತಿರುವುದನ್ನು ಕಂಡ ಸಾರ್ವಜನಿಕರು ತಕ್ಷಣ ನಗರ ಠಾಣೆಯ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೋಲಿಸರು ಶವವನ್ನು ನಂದಿಯಿಂದ ಮೇಲೆತ್ತಿ ಕಾಫರ್ಡ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಿದ್ದಾರೆ.