ನಿಲ್ಲದ ಮಕನ ಕಾಡಾನೆಯ ಉಪಟಳ : ಹಲಸುಲಿಗೆ ನ್ಯಾಯಬೆಲೆ ಅಂಗಡಿಗೆ ನುಗ್ಗಿ ದಾಂದಲೆ
20 ದಿನದ ಅಂತರದಲ್ಲಿ ಎರಡನೇ ಬಾರಿ ದಾಳಿ:ಮಕನ ಆನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯ ಮೀನಾಮೇಶ ಎಣಿಸುತ್ತಿದೆ.
ಸಕಲೇಶಪುರ : ಕಳೆದ ಎರಡು ಮೂರು ವರ್ಷಗಳಿಂದ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು ಅ ಪೈಕಿ ಮಕನ ಆನೆಯ ಹಾವಳಿ ತೀವ್ರಗೊಂಡಿದೆ.
ಕೇವಲ ಶೇಖರಿಸಿ ಇಟ್ಟಿರುವ ದವಸ ಧಾನ್ಯಗಳನ್ನು ತಿನ್ನಲು ಮನೆ,ಸರ್ಕಾರಿ ಗೋದಾಮು,ಸಹಕಾರ ಸಂಘದ ಸೊಸೈಟಿಗಳು ಮೇಲೆ ದಾಳಿ ಮಾಡುವುದನ್ನು ರೂಡಿಸಿಕೊಂಡಿದ್ದು ಇದರಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಹಲಸುಲಿಗೆ ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ರಾತ್ರಿ ಪಡಿತರ ಚೀಟಿದಾರರಿಗೆ ವಿತರಿಸಲು ಸಂಗ್ರಹಿಸಿಟ್ಟಿದ್ದ ಅಕ್ಕಿಯ ಮೇಲೆ ಕಣ್ಣಾಕಿದ್ದು ನ್ಯಾಯಬೆಲೆ ಅಂಗಡಿ ಮೇಲೆ ದಾಳಿ ನಡೆಸಿ ಕಿಟಕಿ ಬಾಗಿಲುಗಳನ್ನು ಮುರಿದು ಹಾಕಿದೆ.
ಹೀಗೆ ಬೇಲೂರು ಆಲೂರು ಹಾಗೂ ಸಕಲೇಶಪುರ ತಾಲೂಕಿನಲ್ಲಿ ದಾಳಿ ನಡೆಸಿರುವ ಈ ಮಕನ ಆನೆಯನ್ನು ಸೆರೆ ಹಿಡಿಯುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅರಣ್ಯ ಇಲಾಖೆ ಮಾತ್ರ ಮತ್ತಷ್ಟು ದಾಳಿ ನಡೆಸಲು ಸೆರೆ ಹಿಡಿಯದೆ ಉದಾಸೀನತೆ ತೋರುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಅರಣ್ಯ ಇಲಾಖೆ ಗುರಿಯಾಗಿದ್ದಾರೆ.