ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಪುರಸಭಾ ಅಧ್ಯಕ್ಷರಿಂದ ಗುದ್ದಲಿ ಪೂಜೆ
ಸಕಲೇಶಪುರ: ಸುಮಾರು 2 ಕೋಟಿ ರೂ ವೆಚ್ಚದಲ್ಲಿ ಪಟ್ಟಣದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಮಾಡಲಾಗುತ್ತದೆ ಎಂದು ಪುರಸಭಾ ಅಧ್ಯಕ್ಷ ಕಾಡಪ್ಪ ಹೇಳಿದರು.
ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿದ ನಂತರ ಮಾತನಾಡಿ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಬಹು ನಿರೀಕ್ಷಿತ ಪುಡ್ ಕೋರ್ಟ್ 27.62ಲಕ್ಷರೂಗಳಲ್ಲಿ, ಚಂಪಕನಗರ ಪಾರ್ಕ್ ಅಭಿವೃದ್ದಿ ಕೆಲಸ 29.60 ಲಕ್ಷರೂಗಳಲ್ಲಿ, ತೇಜಸ್ವಿ ವೃತ್ತ ಅಭಿವೃದ್ದಿ ಕೆಲಸ 26.80 ಲಕ್ಷ, ಹೆನ್ನಲಿ ಜ್ಯಾಕ್‌ವೆಲ್ ಹತ್ತಿರ ಕ್ವಾಟ್ರಸ್ ನಿರ್ಮಾಣ ಮತ್ತು ಹೈಮಾಸ್‌ಕ್ ದೀಪ ಅಳವಡಿಸುವ ಕೆಲಸ 30ಲಕ್ಷ , ಟೋಲ್ ಗೇಟ್‌ನಿಂದ ಬಾಳೆಗದ್ದೆವರೆಗೆ ಬೀದಿ ದೀಪ ಅಳವಡಿಸುವ ಕೆಲಸ 50 ಲಕ್ಷ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹತ್ತಿರ ಇರುವ ಕೆರೆಯ ಸುತ್ತ ವಾಕಿಂಗ್ ಪಾತ್, ಲೈಟ್‌ಸ್ ಮತ್ತು ಚೈನ್‌ಲಿಂಕ್ ಫೆನ್ಸಿಂಗ್ ಅಳವಡಿಸುವ ಕೆಲಸ 29.50 ಲಕ್ಷ, ಮುಸ್ಲಿಂ ಸ್ಮಶಾನ ಅಭಿವೃದ್ದಿ ಕೆಲಸ 10.40 ಲಕ್ಷ ರೂಗಳು, ಒಟ್ಟು 2 ಕೋಟಿ 3ಲಕ್ಷದ 92ಸಾವಿರ ರೂಗಳಲ್ಲಿ ಪಟ್ಟಣದಲ್ಲಿ ವಿವಿ‘ ಅಭಿವೃದ್ದಿ ಕಾಮಗಾರಿಗಳನ್ನು ಮಾಡಲಾಗುತ್ತದೆ.
ಈ ಸಂ‘ರ್‘ದಲ್ಲಿ ಪುರಸಭಾ ಉಪಾಧಕ್ಷೆ ಸರಿತಾ, ಮಾಜಿ ಪುರಸಭಾ ಅಧ್ಯಕ್ಷರುಗಳಾದ ಆದರ್ಶ, ಪುರಸಭಾ ಸದಸ್ಯರುಗಳಾದ ಉಮೇಶ್,ಮೋಹನ್, ಇಸ್ರಾರ್, ಜ್ಯೋತಿ, ನರ್ತನ್, ಅನ್ನಪೂರ್ಣ ,ರೇಖಾ ರುದ್ರಕುಮಾರ್ ಮುಂತಾದವರು ಹಾಜರಿದ್ದರು.
ರಸ್ತೆ ಬದಿ ವ್ಯಾಪಾರಸ್ಥರ ಆಕೊ್ರೀಷ: ಚುನಾವಣೆ ನೀತಿ ಸಂಹಿತಿ ಜಾರಿಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಪುರಸಭಾ ಆಡಳಿತ ಪುಡ್ ಕೋರ್ಟ್‌ಗೆ ಗುದ್ದಲಿಪೂಜೆ ಮಾಡಿರುವುದು ಸರಿಯಾದ ಕ್ರಮವಲ್ಲ , ಆದರೆ ಪುಡ್‌ಕೋರ್ಟ್ ಕುರಿತು ಬೀದಿ ಬದಿಯ ವ್ಯಾಪಾರಿಗಳಿಗೆ ಮಾಹಿತಿ ಇಲ್ಲ. ಪುಡ್ ಕೋರ್ಟ್ ಮಾಡುತ್ತಿರುವ ಜಾಗ ಕಂದಾಯ ಇಲಾಖೆಗೆ ಸೇರಿರುವ ಜಾಗವಾಗಿದೆ. ಇಲ್ಲಿ ಪುಡ್ ಕೋರ್ಟ್ ಮಾಡುವುದು ಅನುಮಾನವಾಗಿದೆ. ಚುನಾವಣೆ ಸಂದರ್ಭದಲ್ಲಿ ಜನರನ್ನು ಏಮಾರಿಸಲು ಈ ಕಾಮಗಾರಿ ಮಾಡಲಾಗುತ್ತಿದೆ ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಬ್ದುಲ್ ವಾಜೀದ್ ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ತಿಂಡಿಗಾಡಿ ಮಾರಾಟಗಾರರ ಸಂಘದ ಅಧ್ಯಕ್ಷ ರವಿಕುಮಾರ್, ಜಯಣ್ಣ , ಅಕ್ಬರ್, ಕೀರ್ತಿ ಮತ್ತಿತರರು ಹಾಜರಿದ್ದರು.