ಸಕಲೇಶಪುರ : ಚುನಾವಣಾ ಆಯೋಗದ ನಿರ್ದೇಶನ ಮೇರೆಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ಮತದಾನ ಜಾಗೃತಿ ಜಾಥಾ ಪಟ್ಟಣದಲ್ಲಿ ನಡೆಯಿತು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ನೇತೃತ್ವದಲ್ಲಿ ಶಿಕ್ಷಣ ಇಲಾಖೆ, ಸ್ತ್ರೀ ಸಂಘಗಳು ಮತ್ತು ತಾಲ್ಲೂಕು ಪಂಚಾಯಿತಿ ಸಹಭಾಗಿತ್ವದಲ್ಲಿ ನಡೆದ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ಹಳೆ ಬಸ್ ನಿಲ್ದಾಣದಲ್ಲಿ ಸ್ವೀಪ್ ಸಮಿತಿ ವತಿಯಿಂದ ಮಾನವ ಸರಪಳಿ ಮಾಡಿ ಮತದಾನದ ಮಹತ್ವ ಕುರಿತು ಜಾಗೃತಿ ಮಂಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾ.ಪಂ ಕಾರ್ಯನಿರ್ವಣಾಧಿಕಾರಿ ವೆಂಕಟೇಶ್ ಇತ್ತೀಚಿನ ದಿನಗಳಲ್ಲಿ ಯುವಕರು ಮತದಾನ ಪ್ರಕ್ರಿಯೆಯಿಂದ ಹಿಂದುಳಿಯುತ್ತಿದ್ದಾರೆ. ಜಾತಿ, ಭೇದ, ಮತ,ಪಂಥ ತೊರೆದು ಮತದಾನ ಮಾಡಬೇಕು ಎಂದು ಅರಿವು ಮೂಡಿಸುವ ಸಲುವಾಗಿ ಜಾಥ ಹಮ್ಮಿಕೊಳ್ಳಲಾಗಿದೆ ಎಂದರು.
ನಮ್ಮ ಮತ ನಮ್ಮ ಧ್ವನಿ, ನೈತಿಕ ಮತದಾನ ದೇಶಕ್ಕೆ ಹಿತ, ಯುವ ಮತದಾರರು ಮತದಾನದಲ್ಲಿ ಪಾಲ್ಗೊಳ್ಳಿ ಎಂದು ಜಾಥಾದ ಮೂಲಕ ತಿಳಿಸಲಾಯಿತು ಎಂದರು.
ಅಕ್ಷರ ದಾಸೋಹದ ಮಂಜುನಾಥ್ ಮಾತನಾಡಿ, ಮತದಾನ ಹಕ್ಕು ಹೊಂದಿರುವ
ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಚುನಾವಣೆ
ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಹಕ್ಕನ್ನು ಕಡ್ಡಾಯವಾಗಿ
ಚಲಾಯಿಸಬೇಕು. ಇದರಿಂದ ಪ್ರಜಾಪ್ರಭುತ್ವ
ಗೌರವಿಸಿದಂತಾಗುತ್ತದೆ ಎಂದರು. ಪ್ರಜ್ಞಾವಂತ ಮತದಾರರು ತಾವು ಮತ ಚಲಾಯಿಸಬೇಕು,ಇತರರಿಗೂ ಮತ ಚಲಾಯಿಸಲು ತಿಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕರಾದ ಆದಿತ್ಯ, ಹರೀಶ್, ಶಿಕ್ಣಣ ಇಲಾಖೆಯ ತಮ್ಮಣ್ಣ ಶೆಟ್ಟಿ, ಜಗದೀಶ್, ಸೇರಿದಂತೆ ಇನ್ನಿತರರು ಇದ್ದರು.