Thursday, November 21, 2024
Homeಸುದ್ದಿಗಳುಸಕಲೇಶಪುರ69ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಶಾಸಕರು.

69ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಶಾಸಕರು.

ಮಾತೃ ಭಾಷೆಯ ಮೇಲೆ ಪ್ರೀತಿ ಇರಬೇಕು ಶಾಸಕ ಸಿಮೆಂಟ್ ಮಂಜು ಅಭಿಮತ.

69ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಶಾಸಕರು.

ಸಕಲೇಶಪುರ: ಕನ್ನಡ ನೆಲ, ಜಲ, ಸಂಸ್ಕೃತಿ ಬಗ್ಗೆ ಪ್ರತಿಯೋರ್ವರಿಗೆ ಪ್ರೀತಿ ಇದ್ದಲ್ಲಿ ಮಾತ್ರ ಮಾತೃಭಾಷೆಯ ಬೆಳವಣಿಗೆ ಸಾಧ್ಯ ಎಂದು ಶಾಸಕ ಸಿಮೆಂಟ್‌ಮಂಜು ಹೇಳಿದರು.

   ಪಟ್ಟಣದ ಸುಭಾಷ್ ಮೈದಾನದಲ್ಲಿ ಆಯೋಜಿಸಲಾಗಿದ್ದ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡದ ಕುರಿತು ಅಭಿಮಾನ ಹುಟ್ಟಿದರೆ ಸಾಲದು. ನಮ್ಮ ರಕ್ತದ ಕಣಕಣದಲ್ಲಿ ಕನ್ನಡ ಇರಬೇಕು, ಕನ್ನಡಕ್ಕೆ ಸದಾ ಗೌರವ ಕೊಡಬೇಕು. ಕನ್ನಡ ಎಂಬುದು ಕೇವಲ ಭಾಷೆಯಲ್ಲ ಇದು ನಮ್ಮ ಸಂಸ್ಕೃತಿ,ಇದು ನಮ್ಮ ಆತ್ಮತೆಯಾಗಬೇಕಾಗಿದೆ. ನಮ್ಮ ದೇಶ ಹಾಗೂ ರಾಜ್ಯಕ್ಕಾಗಿ ಸಂಗೋಳ್ಳಿ ರಾಯಣ್ಣ, ಬಸವಣ್ಣ, ಒನಕೆ ಓಬವ್ವ ಕಿತ್ತೂರು ಚೆನ್ನಮ್ಮನಂತಹ ಅಪ್ರತಿಮರು ಹೋರಾಟ ಮಾಡಿದ ನಾಡು ಕರ್ನಾಟಕವಾಗಿದೆ. ಕರ್ನಾಟಕ ರಾಜ್ಯ ಕಟ್ಟುವಲ್ಲಿ ಮೈಸೂರು ಮಹಾರಾಜರ ಪಾತ್ರ ಅನನ್ಯವಾಗಿದೆ. ಮೈಸೂರು ಮಹರಾಜರು ಅನೇಕ ಕೊಡುಗೆಗಳನ್ನು ರಾಜ್ಯಕ್ಕೆ ನೀಡಿದ್ದಾರೆ. ನಾಲ್ವಡಿ ಕೃಷ್ಣರಾಜ್ ಒಡೆಯರ್ ಕಷ್ಟಕಾಲದಲ್ಲೂ ಸಹ ಆಣೆಕಟ್ಟೆಯನ್ನು ಕಟ್ಟಿ ಲಕ್ಷಾಂತರ ರೈತರ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಇಂತಹ ರಾಜರು ಹುಟ್ಟಿದ ನಾಡು ಕರ್ನಾಟಕವಾಗಿದೆ. ಇಂದು ಪೋಷಕರು ಮಕ್ಕಳಿಗೆ ಆಂಗ್ಲ ಮಾಧ್ಯಮಕ್ಕೆ ಕೊಡುವ ಆದ್ಯತೆಯನ್ನು ಮಾತೃಭಾಷೆ ಕನ್ನಡಕ್ಕೆ ತೋರಿಸುತ್ತಿಲ್ಲ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಾದರೆ ಪೋಷಕರ ಪಾತ್ರವು ಮಹತ್ವದಾಗಿದೆ.ಇಂದು ಐ.ಎ.ಎಸ್ ಪರೀಕ್ಷೆಯನ್ನು ಸಹ ಕನ್ನಡದಲ್ಲಿ ಬರೆಯಬಹುದಾಗಿದೆ. ಇತ್ತೀಚಿಗೆ ರೈಲ್ವೆ ಸಚಿವ ವಿ.ಸೋಮಣ್ಣರವರು ರೈಲ್ವೆ ನೇಮಕಾತಿಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದಾರೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದಂತೆ ಇತಿಹಾಸವನ್ನು ಅರಿಯದವನು ಇತಿಹಾಸವನ್ನು ಸೃಷ್ಟಿಸಲಾರ, ಈ ನಿಟ್ಟಿನಲ್ಲಿ ಕನ್ನಡ, ನೆಲ, ಜಲ, ಸಂಸ್ಕೃತಿ, ಬಗ್ಗೆ ಹೆಚ್ಚಿನ ಅರಿವನ್ನು ಹೊಂದಬೇಕಾಗಿದೆ. ಎತ್ತಿನಹೊಳೆ ಯೋಜನೆಯಿಂದ ನಮ್ಮ ಪೃಕೃತಿಗೆ ಅಪಾರ ನಷ್ಟವಾಗಿದೆ.ಎತ್ತಿನಹೊಳೆ ಸೇರಿದಂತೆ ನಮ್ಮ ಹೇಮಾವತಿ ಸಹ ಹಲವಾರು ಜಿಲ್ಲೆಗಳಿಗೆ ಹೋಗುತ್ತಿದೆ. ಆದರೆ ಇಲ್ಲಿನ ರೈತರು ಬೆಳೆಯುವ ಕಾಫಿ, ಮೆಣಸು, ಏಲಕ್ಕಿ ಅತಿವೃಷ್ಟಿಯಿಂದ ನಷ್ಟವಾಗಿದ್ದು ಮತ್ತೊಂದು ಕಡೆ ಕಾಡಾನೆ ಸಮಸ್ಯೆಯಿಂದ ತತ್ತರಿಸಿದ್ದಾರೆ. ನಾನು ಹಲವು ಬಾರಿ ರಾಜ್ಯ ಸರ್ಕಾರಕ್ಕೆ ಮಲೆನಾಡು ಭಾಗಕ್ಕೆ ಹೆಚ್ಚಿನ ಮೂಲಭೂತ ಸೌಕರ್ಯ ಒದಗಿಸಲು ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು ಸಹ ಯಾವುದೆ ಪ್ರಯೋಜನವಾಗಿಲ್ಲ. ಯಾವುದೆ ಸರ್ಕಾರವಿದ್ದರು ಸಹ ಯಾವುದೆ ಕ್ಷೇತ್ರಕ್ಕೂ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಬಾರದು. ಸುಭಾಷ್ ಮೈದಾನವನ್ನು ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರ ಪರಿಶ್ರಮದಿಂದ ಕೆಲವೊಂದು ಕೆಲಸಗಳನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಲು ಶ್ರಮಿಸುತ್ತೇನೆ ಎಂದರು. 

ಈ ಸಂಧರ್ಭದಲ್ಲಿ ವಿವಿಧ ಶಾಲೆಗಳ ಮಕ್ಕಳಿಂದ ಆಕರ್ಷಕವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಮಾಜದ ವಿವಿಧ ರಂಗಗಳಲ್ಲಿ ಉತ್ತಮ ಸೇವೆ ಸಲ್ಲಿಸಿರುವ 6 ಜನ ಗಣ್ಯರನ್ನು ಸನ್ಮಾನಿಸಲಾಯಿತು. ಪತ್ರಕರ್ತ ಅಕ್ಬರ್ ಜುನೈದ್, ವೈದ್ಯ ಡಾ.ಸುಧುಕರ್, ಮಾಜಿ ಸೈನಿಕ ಸಂತೋಷ್ ಸಾಲ್ಡನಾ, ಸಾಹಿತಿ ವಿಶ್ವಾಸ್ ಡಿ ಗೌಡ, ಕ್ಯಾಮನಹಳ್ಳಿ ಜ್ಞಾನಜ್ಯೋತಿ ಪ್ರೌಡಶಾಲೆಯ ದೈಹಿಕ ಶಿಕ್ಷಕ ಮಂಜುನಾಥ ಹಕಾರಿ, ನಾಟಿ ವೈದ್ಯೆ ಮಾಯನೂರಿನ ದೇವಕಮ್ಮರವರನ್ನು ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ತಹಶೀಲ್ದಾರ್ ಮೇಘನಾ, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ, ಪುರಸಭಾ ಅಧ್ಯಕ್ಷೆ ಜ್ಯೋತಿ ರಾಜ್‌ಕುಮಾರ್, ಪುರಸಭಾ ಮುಖ್ಯಾಧಿಕಾರಿ ನಟರಾಜ್, ಕಸಾಪ ತಾಲೂಕು ಅಧ್ಯಕ್ಷೆ ಶಾರದಾ ಗುರುಮೂರ್ತಿ, ಪುರಸಭಾ ಸದಸ್ಯರುಗಳು, ಸಮಾಜದ ಗಣ್ಯರು ಇತರ ಅಧಿಕಾರಿಗಳು ಹಾಜರಿದ್ದರು

RELATED ARTICLES
- Advertisment -spot_img

Most Popular