ಸಕಲೇಶಪುರ :- ವರ್ತಕರ ಸಂಘದ ಅಧ್ಯಕ್ಷರಾದ ಎಚ್. ಎಸ್ ಉದಯ್ ಅವರ ಅಧ್ಯಕ್ಷತೆಯಲ್ಲಿ ನಗರದ ಟೋಲ್ ಗೇಟ್ ಸಮೀಪವಿರುವ ಮೈತ್ರಿ ಹೋಟೆಲ್ ಹಾಲ್ ಮಾಸಿಕ ಸಭೆ ನಡೆಸಲಾಯಿತು.

ಸಭೆಯಲ್ಲಿ ಚರ್ಚೆಯಾದ ವಿಷಯಗಳು.
1) ಸಂಘದ ಹೊಸ ಸದಸ್ಯರ ನೋಂದಾವಣೆ ಮಾಡಿರುವ ಬಗ್ಗೆ
2) ನಗರದ ಮುಖ್ಯ ರಸ್ತೆ ಅಗಲಿಕರಣ ಹಾಗೂ ಪಾರ್ಕಿಂಗ್ ಸಮಸ್ಯೆ ಬಗ್ಗೆ ಖಾತೆದಾರರ ಜೊತೆ ಸಭೆ ನಡೆಸುವ ಹೊಸ ಸಮಿತಿ ರಚಿಸಿ ತಿಂಗಳ ಕೊನೆಯಲ್ಲಿ ಸಭೆ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು
3) ಬೇಕರಿ, ಹೊಟೇಲ್ ಹಾಗೂ ಎಲ್ಲಾ ದಿನಸಿ ವರ್ತಕರು fssi ಫುಡ್ ಲೈಸೈನ್ಸ್ ಮಾಡಿಸಲು ಆರೋಗ್ಯ ಅಧಿಕಾರಿಗಳ ಜೊತೆ ಸಭೆ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು.
4) ಜಿಯೋ ಮಾರ್ಟ್ ಪಾರ್ಟ್ನರ್ ಇಂದ ದಿನಸಿ ರಿಟೈಲ್ ಗೆ ಆಗುತ್ತಿರುವ ಸಮಸ್ಯೆ ಬಗ್ಗೆ ದಿನಸಿ ಅಂಗಡಿ ಹಾಗೂ ವಿತರಕರ ಜೊತೆ ಸಭೆ ನಡೆಸುವ ತೀರ್ಮಾನಿಸಲಾಯಿತು.
5) ಎಲ್ಲಾ ಅಂಗಡಿ ಮುಂಬಾಗದಲ್ಲಿ 60 ಬಾಗ ಕನ್ನಡ ಇರುವ ಹಾಗೆ ಬೋರ್ಡ್ ಕಡ್ಡಾಯವಾಗಿ ಹಾಕಬೇಕಾಗಿ ಮನವಿ ಮಾಡಿದ್ದಾರೆ.
ಸಭೆಯಲ್ಲಿ ಕಾರ್ಯದರ್ಶಿ ಮಧು, ಖಜಾಂಚಿ ಮಂಜುನಾಥ್ ಸೇರಿದಂತೆ ಸಂಘದ ನಿರ್ದೇಶಕರುಗಳು ಉಪಸ್ಥಿತರಿದ್ದರು.


                                    
