Sunday, April 20, 2025
Homeಕ್ರೈಮ್ದುಷ್ಕರ್ಮಿಗಳಿಂದ ಕುರಿ ಶೆಡ್ಡಿಗೆ ಬೆಂಕಿ

ದುಷ್ಕರ್ಮಿಗಳಿಂದ ಕುರಿ ಶೆಡ್ಡಿಗೆ ಬೆಂಕಿ

ಕುರಿ ಶೆಡ್ಡಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಸಕಲೇಶಪುರ : ಪಟ್ಟಣದ ಆಚಂಗಿ ಬಡಾವಣೆಯಲ್ಲಿ ಕಿಡಿಗೇಡಿಗಳು ಕುರಿ ಶೆಡ್ ವೊಂದಕ್ಕೆ ಬೆಂಕಿ ಹಾಕಿ ಸುಟ್ಟು ಹಾಕಿರುವ ಘಟನೆ ನಡೆದಿದೆ.
ಆಚಂಗಿ ಬಡಾವಣೆಯ ರಜಾಕ್ ಎಂಬುವವರು ಸರ್ಕಾರಿ ಜಾಗದಲ್ಲಿ ಶೆಡ್ದೊಂದನ್ನು ನಿರ್ಮಿಸಿಕೊಂಡು ಕುರಿ ಸಾಕಾಣೆ ಮಾಡಿ ಜೀವನ ಸಾಗಿಸುತ್ತಿದ್ದರು. ಇದನ್ನು ನೋಡಿ ಸಹಿಸಲಾಗದ ಕೆಲವು ಕಿಡಿಗೇಡಿಗಳು ಕಳೆದ ರಾತ್ರಿ ಶೆಡ್ಡಿಗೆ ವಾಹನದ ಟೈರ್ ಉಪಯೋಗಿಸಿಕೊಂಡು ಬೆಂಕಿ ಹಚ್ಚಿ ಸಂಪೂರ್ಣವಾಗಿ ಸುಟ್ಟು ಹಾಕಿದ್ದಾರೆ. ಅದೃಷ್ಟವಶಾತ್ ಶೆಡ್ಡಿನಲ್ಲಿ ಯಾರು ಇಲ್ಲದ ಕಾರಣ ಹೆಚ್ಚಿನ ಅನಾಹುತವಾಗುವುದು ತಪ್ಪಿದೆ.
ಹಲವು ವರ್ಷಗಳಿಂದ ಇದೇ ಜಾಗದಲ್ಲಿ ಕುರಿಗಳನ್ನು ಸಾಕಣೆ ಮಾಡುತ್ತಿದ್ದು, ಆದರೆ ಕಳೆದ ಕೆಲವು ದಿನಗಳ ಹಿಂದೆ ಒಂದು ಬ್ಯಾಚಿನ ಎಲ್ಲಾ ಕುರಿಗಳು ಖಾಲಿ ಯಾದ ಕಾರಣ ಶೆಡ್ಡಿನಲ್ಲಿ ಕುರಿ ಹಾಗೂ ಅದನ್ನು ನೋಡಿಕೊಳ್ಳುತ್ತಿದ್ದ ರಜಾಕ್ ಹಾಗೂ ಅವರ ಸಹೋದರ ರಫೀಕ್ ಇಲ್ಲದ ಕಾರಣ ಯಾವುದೇ ಅನಾಹುತ ನಡೆಯಲಿಲ್ಲ ಎನ್ನಲಾಗಿದೆ

RELATED ARTICLES
- Advertisment -spot_img

Most Popular