2022ನೇ ಸಾಲಿನ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ವಾಡಿಕೆ ಗಿಂತ ಹೆಚ್ಚಿನ ಮಳೆಯಾಗಿದ್ದು ಶೇಕಡ 40ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಕಾಳು ಮೆಣಸು ಬೆಳೆಯಲ್ಲಿ ಹಾನಿ ಸಂಭವಿಸಿದೆ ಎಂದು ಹಾಸನ ಜಿಲ್ಲಾ ಬೆಳೆಗಾರರ ಸಂಘ ತಿಳಿಸಿದೆ.
ನಷ್ಟದ ಬಗ್ಗೆ ಸಮೀಕ್ಷೆ ನಡೆಸಿ ವರದಿ ತಯಾರಿಸಿ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಿ ಕೊಡುವಂತೆ ಬೆಳಗಾರ ಸಂಘಟನೆಗಳು ನಡೆಸಿದ ನಿರಂತರ ಹೋರಾಟದ ಫಲವಾಗಿ ಅತಿವೃಷ್ಟಿ ಹಾನಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಕಲೇಶಪುರ ತಾಲೂಕು ಆಡಳಿತವು ಹಾನಿಯ ಬಗ್ಗೆ ಅರ್ಜಿ ಸ್ವೀಕರಿಸಲು ಮುಂದಾಗಿದೆ.
ಆದ್ದರಿಂದ ಬೆಳಗಾರರು ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ ತಮ್ಮ ಜಮೀನಿನ ಆರ್ ಟಿ ಸಿ, ತಮ್ಮ ಬ್ಯಾಂಕ್ ಖಾತೆ ವಿವರ ತಮ್ಮ ಆಧಾರ್ ಕಾರ್ಡನ್ನು ಲಗತ್ತಿಸಿ ಹಾಸನ್ ಜಿಲ್ಲಾ ಪ್ಲಾಂಟರ್ಸ್ ಸಂಘದ ಕಚೇರಿಗೆ ಅಥವಾ ಹೋಬಳಿ, ತಾಲ್ಲೂಕು ಮಟ್ಟದ ಬೆಳೆಗಾರ ಸಂಘಟನೆಗಳು, ಅಥವಾ ತಮ್ಮ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಗಳಿಗೆ ನೀಡಬೇಕಾಗಿ ಸಂಘವು ತಿಳಿಸಿದೆ.
. ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ನಲ್ಲಿ ತಮ್ಮ ಮಾಹಿತಿಗಳೆಲ್ಲವೂ ಹೊಂದಿಕೆ ಆಗುವಂತಿರಬೇಕು. ತಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಿರಬೇಕು ಎಂದು
ಹಾಸನ ಜಿಲ್ಲಾ ಬೆಳೆಗಾರ ಸಂಘದ ಅಧ್ಯಕ್ಷರಾದ ಸುಬ್ರಮಣ್ಯ ಗೌರವ ಕಾರ್ಯದರ್ಶಿ ರಾಜೀವ್ ಮದನಾ ಪುರ ಹಾಗೂ ಪದಾಧಿಕಾರಿಗಳು, ನಿರ್ದೇಶಕರು ತಿಳಿಸಿದ್ದಾರೆ