Tuesday, April 8, 2025
Homeಸುದ್ದಿಗಳುರಾಜ್ಯಸುಶೀಲಾ ಬಿ.ಬಿ ಶಿವಪ್ಪ ಆರೋಗ್ಯ ವಿಚಾರಿಸಿದ ನಳೀನ್ ಕುಮಾರ್ ಕಟೀಲ್

ಸುಶೀಲಾ ಬಿ.ಬಿ ಶಿವಪ್ಪ ಆರೋಗ್ಯ ವಿಚಾರಿಸಿದ ನಳೀನ್ ಕುಮಾರ್ ಕಟೀಲ್

ಮಾಜಿ ಶಾಸಕ ದಿವಂಗತ ಬಿ.ಬಿ ಶಿವಪ್ಪನವರ ಮನೆಗೆ ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲ್ ಭೇಟಿ: ಶಿವಪ್ಪನವರ ಪತ್ನಿ ಸುಶೀಲಾ ಶಿವಪ್ಪನವರ ಆರೋಗ್ಯ ವಿಚಾರಣೆ

ಸಕಲೇಶಪುರ: ಸುಶೀಲಾ ಬಿ.ಬಿ ಶಿವಪ್ಪನವರ ಅನಾರೋಗ್ಯದ ಹಿನ್ನಲೆಯಲ್ಲಿ ಬುಧವಾರ ತಾಲೂಕಿನ ಕುಂಬರಹಳ್ಳಿಯಲ್ಲಿರುವ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ದಿವಂಗತ ಬಿ.ಬಿ ಶಿವಪ್ಪನವರ ಮನೆಗೆ ಆಗಮಿಸಿ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಬಿಜೆಪಿ ಪಕ್ಷದ ಪ್ರಾರಂ‘ದ ದಿನಗಳಲ್ಲಿ ಹಾಗೂ ಅತಿ ಕಠಿಣ ಪರಿಸ್ಥಿತಿಯಲ್ಲಿ ದಿವಂಗತ ಬಿ.ಬಿ ಶಿವಪ್ಪನವರು ಪಕ್ಷ ಕಟ್ಟಿದರು. ಸುಶೀಲಮ್ಮನವರು ಸಹ ಪಕ್ಷ ಕಟ್ಟಲು ರಾಜ್ಯ ಪ್ರವಾಸ ಮಾಡಿದ್ದರು. ಬಿಜೆಪಿಗೆ ಪಕ್ಷಕ್ಕೆ ಸುಶೀಲಮ್ಮನವರು ಒಂದು ರೀತಿಯ ಚೈತನ್ಯ ಅವರಿಗೆ ಆ ಭಗವಂತ ಹೆಚ್ಚಿನ ಆಯಸ್ಸು , ಆರೋಗ್ಯ ನೀಡಲಿ ಎಂದರು.
ಈ ವೇಳೆ ದಿವಂಗತ ಬಿ.ಬಿ ಶಿವಪ್ಪನವರ ಸೊಸೆ ಶಾಂತಸುಧೀರ್, ಬಿಜೆಪಿ ರಾಜ್ಯ ಪದಾಧಿಕಾರಿಗಳಾದ ಸಿದ್ದರಾಜು, ನಿಜಗುಣರಾಜು, ಕೆ.ಟಿ ಕುಮಾರಸ್ವಾಮಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಎಚ್.ಕೆ ಸುರೇಶ್, ಬಿಜೆಪಿ ತಾಲೂಕು ಅಧ್ಯಕ್ಷ ಮಂಜುನಾಥ್ ಸಂಘಿ, ಬಿಜೆಪಿ ಮುಖಂಡ ಸಿಮೆಂಟ್ ಮಂಜುನಾಥ್, ಮುಂತಾದವರಿದ್ದರು.

RELATED ARTICLES
- Advertisment -spot_img

Most Popular