ತುಮಕೂರು ವಿಶ್ವ ವಿದ್ಯಾಲಯದಲ್ಲಿ ಸಾವರ್ಕರ್ ಅಧ್ಯಯನ ಪೀಠ ಮಾಡದಂತೆ ವಿರೋಧ ವ್ಯಕ್ತ ಪಡಿಸಿರುವ ಪ್ರಗತಿ ಪರ ಚಿಂತಕರ ವಿರೋಧಕ್ಕೆ ಸಕಲೇಶಪುರ ಬಿಜೆಪಿ ಮುಖಂಡರಾದ ಸಿಮೆಂಟ್ ಮಂಜು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ದೇಶ ಕಂಡ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್. ಅವರ ತ್ಯಾಗ, ಹೋರಾಟ ಎಲ್ಲರಿಗೂ ದಾರಿದೀಪ. ಅವರ ಬದುಕಿದ ರೀತಿಯೇ ಅದ್ಭುತ. ಅವರ ಜೀವನ ಕಥನ ಎಲ್ಲರಿಗೂ ಆದರ್ಶಪ್ರಾಯವಾದುದು.
ದೇಶಕ್ಕಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟವರು. ಅಂತಹ ಪುಣ್ಯಾತ್ಮನ ಹೆಸರನ್ನು ಚಿರಸ್ಥಾಯಿಯಾಗಿ ಇರಿಸಬೇಕು ಎಂಬುದು ಎಲ್ಲರ ಜವಾಬ್ದಾರಿಯಾಗಿದೆ.
ಆದರೆ ಈ ವಿಚಾರದಲ್ಲಿ ಕೆಲವು ವ್ಯಕ್ತಿಗಳು ಮಾಡುತ್ತಿರುವ ರಾಜಕೀಯವನ್ನು ನಾವೆಲ್ಲರೂ ಖಂಡಿಸಲೇಬೇಕು. ಇಂತಹ ವ್ಯಕ್ತಿಗಳಿಗೆ ಸಾವರ್ಕರ್ ತ್ಯಾಗದ ಅರಿವಿಲ್ಲ. ಅವರ ಹೋರಾಟದ ವಿಚಾರವೇ ಗೊತ್ತಿಲ್ಲ. ಈ ರೀತಿಯ ವ್ಯಕ್ತಿಗಳು ಸಾವರ್ಕರ್ ಅಧ್ಯಯನ ಪೀಠ ಮಾಡದಂತೆ ತಡೆ ಒಡ್ಡುತ್ತಿರುವುದನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ.
ಮುಂದಿನ ಪೀಳಿಗೆಗೂ ಸಾವರ್ಕರ್ ಹೋರಾಟದ ಹಾದಿ ತಿಳಿಯಲೇ ಬೇಕು. ಅದಕ್ಕಾಗಿ ತುಮಕೂರು ವಿಶ್ವ ವಿದ್ಯಾಲಯದಲ್ಲಿ ಅಧ್ಯಯನ ಪೀಠ ಮಾಡಲೇ ಬೇಕು. ಈ ವಿಚಾರದಲ್ಲಿ ಯಾವುದೇ ವಿರೋಧ ಬಂದರೂ ಆ ವಿರೋಧವನ್ನು ನಿಗ್ರಹಿಸಿ ಮುಂದಕ್ಕೆ ಸಾಗಲೇ ಬೇಕು ಎಂದು ತಮ್ಮ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.