Saturday, April 12, 2025
Homeಸುದ್ದಿಗಳುಸಕಲೇಶಪುರಶಾಸಕರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಕ್ಯಾಮನ ಹಳ್ಳಿ ಜನತೆ

ಶಾಸಕರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಕ್ಯಾಮನ ಹಳ್ಳಿ ಜನತೆ

ಸಕಲೇಶಪುರ ಶಾಸಕರಾದ ಹೆಚ್. ಕೆ ಕುಮಾರ ಸ್ವಾಮಿಯವರನ್ನು ಕ್ಯಾಮನ ಹಳ್ಳಿ ಗ್ರಾಮ ಪಂಚಾಯತ್ ವತಿಯಿಂದ ಅಭಿನಂದಿಸಲಾಯಿತು. ಕ್ಯಾಮನ ಹಳ್ಳಿ ಗ್ರಾಮ ಪಂಚಾಯತದ ಸಭಾಭವನವು ಬಹಳಷ್ಟು ಹಳೆಯದಾಗಿದ್ದು ನಶಿಸುವ ಹಂತದಲ್ಲಿದೆ.

ಈ ಪರಿಸ್ಥಿತಿ ಬಗ್ಗೆ ಶಾಸಕರಿಗೆ ಈ ಗ್ರಾಮ ಪಂಚಾಯತವು ಮನವಿ ಮಾಡಿದಾಗ ಶಾಸಕ ಹೆಚ್. ಕೆ. ಕುಮಾರ ಸ್ವಾಮಿಯವರು ರೂ 25 ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಗ್ರಾಮೀಣ ಪ್ರದೇಶದ ಅಭಿವೃದ್ದಿಗೆ ಸದಾ ಸಹಕಾರ ನೀಡುವುದಾಗಿ ಅವರು ಈ ಸಂದರ್ಭ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಹನಾ, ಸದಸ್ಯರಾದ ಸಚಿನ್, ಕುಮಾರ್ ಆಕಾಶ್, ಮಲ್ಲೇಶ್ , ಅಭಿವೃದ್ದಿ ಅಧಿಕಾರಿ ಸಂಗಮೇಶ್ ಬಾಗೆ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular