ದಿನ ಬೆಳಗಾದರೆ ಸಕಲೇಶಪುರದ ಜನತೆಯ ಮನದಲ್ಲೊಂದೆ ಕಳವಳ ರಾತ್ರಿ ಕಾಡನೆ ನಮ್ಮ ಜಮೀನಿಗೆ ಬಂದಿದೆಯೋ?? ಏನೋ?? ಏನಾಗಿದೆಯೋ?? ಒಂದೊಮ್ಮೆ ಜಮೀನಿಗೆ ಭೇಟಿ ನೀಡಿ ವರ್ಷದ ಕೂಳಿನ ಅವಸ್ಥೆ ಹೇಗಿದೆ ಎಂದು ದೇವರಿಗೆ ಕೈ ಮುಗಿದು ಜಮೀನಿಗೆ ಹೊರಡುವ ರೈತ ಒಂದೆಡೆಯದರೆ .. ಜಮೀನಿಗೆ ಹೋದ ರೈತ ಮರಳಿ ಮನೆಗೆ ಕ್ಷೇಮವಾಗಿ ಬರಲೆಂದು ಅದೇ ದೇವರಲ್ಲಿ ಪ್ರಾರ್ಥಿಸುವ ಕುಟುಂಬಸ್ಥರು ಇನ್ನೊಂದೆಡೆ.. ಸಕಲೇಶಪುರದ ಪ್ರತಿ ಮನೆಯ ಚಿತ್ರಣವೂ ಹೀಗೆ.. ಹೊಟ್ಟೆಪಾಡಿಗಾಗಿ ತೋಟ ಜಮೀನಿನಲ್ಲಿ ಕೆಲಸ ಮಾಡುವುದು ಅನಿವಾರ್ಯವಾಗಿರುವ ಕೃಷಿಯಾದಾರಿತ ಈ ಭಾಗದಲ್ಲಿ ಕಾಡಾನೆ ಹಾವಳಿಯಿಂದ ಜನ ಜೀವಭಯವಿದ್ದರೂ ಹೊಟ್ಟೆ ತುಂಬಿಸಿಕೊಳ್ಳಲು ಜೀವದ ಹಂಗು ತೊರೆದು ಕೃಷಿಕಾರ್ಯ ಮಾಡಬೇಕಾದ ಸ್ಥಿತಿ ಎದುರಗಿದೆ. ಇನ್ನೆಷ್ಟು ದಿನ ಭಯದಲ್ಲೇ ಬದುಕಬೇಕು ನಮ್ಮ ಸಕಲೇಶಪುರ-ಆಲೂರು ಜನತೆ…??
ಈ ಕಾಡಾನೆ ಮಾನವ ಸಂಘರ್ಷಕ್ಕೆ ಪರಿಹಾರ ಕೊಡಿಸುವವರಾರು..?? ಯಾರ ಬಳಿ ಹೋಗಬೇಕು?? ಯಾರನ್ನು ಕೇಳಿದರೆ ಪರಿಹಾರ ಸಿಗುವುದು??ಹಳ್ಳಿಗಳಿಂದ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಹೇಗೆ ?? ಸಕಲೇಶಪುರ ಜನತೆಯ ಜೀವನ ಹಾಗೂ ಜೀವಕ್ಕೆ ಭದ್ರತೆ ನೀಡುವರಾರು?? ಎಂಬ ಎಲ್ಲರ ಪ್ರಶ್ನೆಗೆ ಯಾರಾದರೂ ಕ್ಷೆತ್ರದ ಜನಪ್ರತಿನಿದಿ ಎಚ್.ಕೆ ಕುಮಾರಸ್ವಾಮಿ ಎಂಬ ಉತ್ತರ ಹೇಳಿದರೆ… ಮುಂದೆ ನಿಂತವರ ಕಣ್ಣು ಕೆಂಪಗಾಗಿ ಬಾಯಿಗೆ ಬಂದ ಹಾಗೆ ಬಯ್ಯಿಸಿ ಕೊಳ್ಳಬೇಕಾದ ಪರಿಸ್ಥಿತಿ ಎದುರಾದೀತು…
ನಮ್ಮ ಕ್ಷೆತ್ರದ ಶಾಸಕರಿಗೇಕೆ ಕಾಡಾನೆ ಸಮಸ್ಯೆಯನ್ನು ಪರಿಹರಿಸುವ ಉತ್ಸಾಹ ಇಲ್ಲ??
ಕಾಡಾನೆ ಮಾನವ ಸಂಘರ್ಷ ಪರಿಹಾರಕ್ಕೆ ಸಂಬಂಧಪಟ್ಟ ತಜ್ಞರ ಹಾಗೂ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡುವ ಕೆಲಸವೇಕೆ ಶಾಸಕರಿಂದ ಆಗುತ್ತಿಲ್ಲ ??
ಕ್ಷೆತ್ರದಲ್ಲಿ ಆಗುತಿರುವ ಸಾವು ನೋವಿಗೆ ಪರಿಹಾರ ಹುಡುಕುವ ಪ್ರಯತ್ನವನ್ನೂ ಮಾಡುತ್ತಿಲ್ಲವೇಕೆ ನಮ್ಮ ಶಾಸಕರು..??
ಮತ ಪಡೆದುಕೊಂಡು ಗೆದ್ದ ಶಾಸಕರಿಗೆ ಕ್ಷೇತ್ರದ ಜನರ ನೋವನ್ನು ನೀವಾರಿಸುವ ಮನಸಿಲ್ಲವೇಕೆ??
ನೋವಿಗೆ ಸ್ಪಂದಿಸುವ ಮನಸಿಲ್ಲದ ಮೇಲೆ ಕ್ಷೆತ್ರದ ಜನರಲ್ಲಿ ಮತ ಕೇಳಿದ್ದಾದರೂ ಏಕೆ??
ಕಳೆದ 15 ವರ್ಷಗಳಿಂದ ಕ್ಷೇತ್ರದಿಂದ ಗೆದ್ದು ಕ್ಷೆತ್ರದ ಜನತೆಯ ಏಕೈಕ ಬೇಡಿಕೆ ಈಡೇರಿಸಲು ಸಾಧ್ಯವಾಗದ ಮೇಲೆ ಇನ್ನೇನು ಸಾಧಿಸಬೇಕಿದೆ ??
ಸಂಪೂರ್ಣ ಕೃಷಿಯನ್ನೇ ಅವಲಂಬಿಸಿರುವ ಸಕಲೇಶಪುರದ ಜನತೆಗೆ ಪರ್ಯಾಯ ವ್ಯವಸ್ಥೆಯಾದರೂ ಏನು??
ಕಣ್ಣ ಮುಂದೆ ಇಷ್ಟೊಂದು ರೈತರ ಸಾವು ನೋವುಗಳಾದರೂ ನ್ಯಾಯ ಕೊಡಿಸದೆ ಮೂಕರಾಗಿರುವುದೇಕೆ ವಕೀಲ ಎಚ್.ಕೆ ಕುಮಾರಸ್ವಾಮಿಯವರೇ ??
ಕೆಲ ದಿನಗಳ ಹಿಂದೆ ಹೆದ್ದಾರಿಯಲ್ಲಿ ಒಂದೆರಡು ಗಂಟೆಗಳ ಕಾಲ ಪ್ರತಿಭಟನೆ ಮಾಡಿದ ಮಾತ್ರಕ್ಕೆ ಶಾಸಕ ಸ್ಥಾನದ ಜವಾಬ್ದಾರಿ ಮುಗಿಯಿತೇ??
ಸರ್ಕಾರಕ್ಕೆ ಮನವಿ ಮುಟ್ಟೀತೆ?? ಅದೇಕಿಷ್ಟು ಬೇಜವಬ್ದಾರಿತನ??
ರೈತರ ಜೀವಕ್ಕೆ ಸರ್ಕಾರದ ಆರೇಳು ಲಕ್ಷದ ಚೆಕ್ ನೀಡುವ ಮಧ್ಯವರ್ತಿಯಾಗಲು ಮನವೊಪ್ಪುವುದೇ??
ಸರ್ಕಾರದ ಕೈ ಕಾಲು ಹಿಡಿದಾದರೂ ಸರಿ ಕ್ಷೇತ್ರದ ಸಮಸ್ಯೆಗೆ ಪರಿಹಾರ ಒದಗಿಸಲೇ ಬೇಕೆಂಬ ಹಠವೇಕಿಲ್ಲ ಶಾಸಕರೇ??
ಜನಸೇವೆಗೆಂದು ಆಯ್ಕೆಯಾದ ಜನಪ್ರತಿನಿದಿಯಾಗಿ ಮಾಡಿದ್ದಾದರೂ ಏನು,??
60ಕ್ಕೂ ಹೆಚ್ಚಿನ ಕಾಡಾನೆಗಳು ಸಕಲೇಶಪುರ ಆಲೂರು ಪ್ರದೇಶದಲ್ಲೇ ಬೀಳು ಬಿಟ್ಟಿದ್ದು ಹಗಲು ರಾತ್ರಿಯೆನ್ನದೆ ಎಲ್ಲೆಂದರಲ್ಲಿ ಓಡಾಡುತ್ತಿವೆ. . ಸಾಲ ಮಾಡಿ ಹೊಟ್ಟೆ-ಬಟ್ಟೆ ಕಟ್ಟಿ ಕಷ್ಟಪಟ್ಟು ಬೆಳೆದ ಬೆಳೆಗಳ ಮೇಲೆ ಕಾಡಾನೆಗಳು ಹಿಂಡು ಹಿಂಡಾಗಿ ಜಮೀನುಗಳಲ್ಲಿ ಓಡಾಡುತ್ತಿರುವುದರಿಂದ ಬೆಳೆಗಳು ನೆಲಸಮವಾಗಿ ಅದೆಷ್ಟೋ ಚಿಕ್ಕ-ಪುಟ್ಟ ರೈತರ ಪಾಡು ಹೇಳತೀರದಾಗಿದೆ . ಕಾಡಾನೆ ಹಾವಳಿ ಯೆತೇಚ್ಚವಾಗಿರುವುದರಿಂದ ಕೂಲಿಯಾಳುಗಳು ಪ್ರಾಣಭಯದಿಂದ ಕೆಲಸಕ್ಕೆ ಬಾರದೆ ತಾಲ್ಲೂಕಿನ ಕೆಲ ಭಾಗದಲ್ಲಿ ತೋಟಗಳ ನಿರ್ವಹಣೆ ಕಷ್ಟ ಸಾಧ್ಯವಾಗಿದೆ. ಕಾಫಿ ಬೆಳೆಯನ್ನೇ ಅವಲಂಬಿತವಾಗಿರುವ ಈ ತಾಲ್ಲೂಕಿನಲ್ಲಿ ಜನ ಕಾಫಿ ಬೆಳೆಯುವುದನ್ನೇ ನಿಲ್ಲಿಸಬೇಕೇನೋ ಎನ್ನುವಷ್ಟರ ಮಟ್ಟಿಗೆ ಚಿಂತಾಗ್ರಸ್ತರಾಗಿದ್ದಾರೆ..ಬಹುತೇಕ ರೈತರು ಜೋಳ, ಬತ್ತ, ರಾಗಿ ಬೆಳೆಯುವುದನ್ನು ನಿಲ್ಲಿಸಿದ್ದಾರೆ. ಸಕಲೇಶಪುರ-ಆಲೂರು ಭಾಗದ ಬಹುತೇಕ ಬೆಳೆಗಾರರು ತೋಟದ ಕೆಲಸಕ್ಕೆ ಕೆಲಸಗಾರರೂ ಬಾರದೆ, ತೋಟ ನಿರ್ವಹಣೆ ಮಾಡಲಾಗದೆ, ಬೆಳೆ ಕೊಯ್ಲು ಮಾಡಲಾಗದೆ, ಅತ್ಯಂತ ಇಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದ್ದಾರೆ.. ಅತ್ಯಂತ ಬೇಡಿಕೆ ಇದ್ದ ಕಾಫಿ ತೋಟಗಳು ಮಾರಾಟಕ್ಕಿಟ್ಟರೂ ಕಾಡಾನೆ ಹಾವಳಿಯಿರುವ ಸಕಲೇಶಪುರದ ಭಾಗದಲ್ಲಿ ಕೊಳ್ಳಲು ಆಸಕ್ತರು ಹಿಂದೇಟು ಹಾಕ್ತಿದ್ದಾರೆ, ಸೂರ್ಯ ಮುಳುಗುತ್ತಿದ್ದಂತೆ ಬೀದಿಗಿಳಿಯುತ್ತಿದ್ದ ಕಾಡಾನೆಗಳಿಗ ಹಗಲಿನಲ್ಲೇ ಮುಖ್ಯರಸ್ತೆಗಳಲ್ಲಿ ಎಲ್ಲೆಂದರಲ್ಲಿ ಓಡಾಡತೊಡಗಿವೆ, ನಿಜವಾಗಿಯೂ ಇವೆಲ್ಲ ಕಳವಳಕಾರಿ ಬೆಳವಣಿಗೆಯಾಗಿದೆ ಇದೆ ರೀತಿ ಮುಂದುವರಿದರೆ ಸ್ಥಳೀಯರು ಗದ್ದೆ ತೋಟಗಳಿದ್ದರೂ ಕೃಷಿ ಕಾರ್ಯ ಮಾಡಲಾಗದೆ ಆರ್ಥಿಕವಾಗಿ ಕುಗ್ಗಿ ಬೇರೆ ಪ್ರದೇಶಗಳಿಗೆ ವಲಸೆ ಹೋಗುವ ಪರಿಸ್ಥಿತಿ ಬಂದರೂ ಬರಬಹುದು..
✒️ ಯಶ್ವಂತ್ ಬಾಳ್ಳುಪೇಟೆ