Saturday, November 23, 2024
Homeಸುದ್ದಿಗಳುಸಕಲೇಶಪುರಭ್ರಷ್ಟಾಚಾರ ಮತ್ತು ಅನ್ಯಾಯದ ವಿರುದ್ಧ ಎಸ್ಡಿಪಿಐ ಧ್ವನಿ : ಅನಂದ್ ಮಿತ್ತಬೈಲ್

ಭ್ರಷ್ಟಾಚಾರ ಮತ್ತು ಅನ್ಯಾಯದ ವಿರುದ್ಧ ಎಸ್ಡಿಪಿಐ ಧ್ವನಿ : ಅನಂದ್ ಮಿತ್ತಬೈಲ್

ಸಕಲೇಶಪುರ ಭ್ರಷ್ಟಾಚಾರ ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತುವ ನೈತಿಕತೆಯನ್ನು ಕೇವಲ ಎಸ್ಡಿಪಿಐ ಪಕ್ಷ ಮಾತ್ರ ಉಳಿಸಿಕೊಂಡಿದೆ ಎಂದು ಎಸ್ಡಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಹಾಸನ ಜಿಲ್ಲಾ ಗ್ರಾಮಾಂತರದ ಉಸ್ತವಾರಿ ಆನಂದ ಮಿತ್ತಬೈಲು ಹೇಳಿದರು
ಪಟ್ಟಣದ ಪ್ರೇಮ ನಗರ ಬಡಾವಣೆಯಲ್ಲಿ ಇತ್ತೀಚೆಗೆ ತಡೆಗೋಡೆ ಕುಸಿತ ಉಂಟಾದ ಸ್ಥಳಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊಳಚೆ ಮಂಡಳಿಯಿಂದ ನಿರ್ಮಾಣವಾಗುತ್ತಿರುವ ತಡೆಗೋಡೆ ಕಾಮಾಗಾರಿಯೂ ಅತ್ಯಂತ ಕಳಪೆಯಾಗಿದೆ, ಬಿಜೆಪಿಯ ನಾಲ್ವತ್ತು ಪರ್ಸೆಂಟ್ ಇದರಲ್ಲೂ ಕೆಲಸ ಮಾಡಿರಬಹುದು ಎಂಬ ಅನುಮಾನವಿದೆ ಎಂದರು. ಗುತ್ತಿಗೆದಾರನ ಮೇಲೆ ತಕ್ಷಣಕ್ಕೆ ಪ್ರಕರಣ ದಾಖಲಿಸಬೇಕು ಅನುದಾನದ ದುರ್ಬಳಕೆ ಮಾಡಿರುವವರ ವಿರುದ್ದ ತನಿಖೆ ನಡೆಸಿ ಬಹಿರಂಗಗೊಳಿಸಬೇಕು, ಕಳಪೆ ಕಾಮಗಾರಿ ಕೈಗೊಂಡಿರುವವರ ವಿರುದ್ದ ಕ್ರಮ ಕೈಗೊಳ್ಳದಿದ್ದರೆ ನಮ್ಮ ಪಕ್ಷ ಹೋರಾಟವನ್ನು ಕೈಗೊಳ್ಳತ್ತದೆ ಎಂದು ಎಚ್ಚರಿಸಿದರು.
ಕಾಮಗಾರಿಯ ಪ್ರಾರಂಭದ ಹಂತದಲ್ಲೆ ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳಿಯರು ಅರೋಪಿಸಿ ಕೆಲಸವನ್ನು ನಿಲ್ಲಿಸಿದರು ಸಹ ಗುತ್ತಿಗೆದಾರ ಕಾಮಗಾರಿಯನ್ನು ಮುಂದುವರೆಸಿದ್ದಾರೆ ರಾಜ್ಯದಲ್ಲಿ ಅಡಳಿತ ವ್ಯವಸ್ಥೆಯ ದುರಾವಸ್ಥೆಯನ್ನು ಜನರು ಪ್ರಶ್ನಿಸದಿದ್ದರೆ ಮುಂದಿನ ದಿನಗಳಲ್ಲಿ ಜನರ ಜೀವನ ಕಷ್ಟವಾಗುತ್ತದೆ ಎಸ್ಡಿಪಿಐ ಪಕ್ಷ ಭ್ರಷ್ಟಾಚಾರಕ್ಕೆ ಪ್ರತಿರೋದ ಒಡ್ಡಲಿದೆ ಎಂದರು.
ಈ ಸಂದರ್ಭದಲ್ಲಿ ಆನೆಮಹಲ್ ಗ್ರಾಪಂ ಅಧ್ಯಕ್ಷ ಅಶ್ರಪ್ ಕೋಟೆ, ಪಕ್ಷದ ಮುಖಂಡರಾದ ಇಮ್ರಾನ್ ಅರೆಹಳ್ಳಿ, ಅಝರ್, ಇಸಾಕ್, ಶಂಶುದ್ದೀನ್ ಕಡಲೂರು, ಮೂಸ, ನಯಿಮ್ ಮತ್ತು ಅಪ್ಸರ್ ಸೇರಿದಂತೆ ಇನ್ನಿತರರು ಇದ್ದರು.
RELATED ARTICLES
- Advertisment -spot_img

Most Popular