ಸಕಲೇಶಪುರ: ಹಾಸನ ಜಿಲ್ಲಾ ಪ್ಲಾಂಟರ್ ಸಂಘದ 2021- 23ನೇ ಸಾಲಿನ ಕಾರ್ಯಕಾರಿ ಮಂಡಳಿಯ 12ನೇ ಮಾಸಿಕ ಸಭೆಯು ಸಂಘದ ಸಭಾಂಗಣದಲ್ಲಿ ನಡೆಯಿತು. ಸಕಲೇಶಪುರದಿಂದ ವರ್ಗಾವಣೆಗೊಂಡ ರೈತ ಪರ ನಿಲುವು ಹೊಂದಿದ್ದ ಸಕಲೇಶಪುರದ ಉಪವಿಭಾಗಾಧಿಕಾರಿಗಳಾದ ಶ್ರೀ ಪ್ರತೀಕ್ ಬಯಾಲ್ ರವರನ್ನು ಅಭಿನಂದಿಸಲಾಯಿತು.ಸಭೆಯಲ್ಲಿ ತಹಶೀಲ್ದಾರ್ ಜಯಕುಮಾರ್ ರವರು ಸಭೆಯಲ್ಲಿ ಹಾಜರಿದ್ದು ಅತಿವೃಷ್ಟಿ ಪರಿಹಾರದ ವಿಚಾರಕ್ಕೆ ಸಂಬಂಧಪಟ್ಟ ಕೆಲವು ಗೊಂದಲಗಳಿಗೆ ವಿವರಣೆ ನೀಡಿದರು. ಕಾಫಿ ಮಂಡಳಿ ಉಪ ನಿರ್ದೇಶಕರಾದ ಶ್ರೀ ಮಲ್ಲಿಕಾರ್ಜುನ್ ರವರು ಸಭೆಯಲ್ಲಿ ಉಪಸ್ಥಿತರಿದ್ದರು. ಉತ್ತಮವಾಗಿ ಸಭೆಗಳನ್ನು ಹಮ್ಮಿಕೊಂಡು ಯಶಸ್ವಿಯಾದ ಯಸಳೂರು ಹೋಬಳಿ ಬೆಳಗಾರ ಸಂಘದ ಅಧ್ಯಕ್ಷರನ್ನು ಹಾಗೂ ಬ್ಯಾಕರವಳ್ಳಿ ಪಂಚಾಯಿತಿ ಬೆಳಗಾರರ ಸಂಘದ ಅಧ್ಯಕ್ಷರನ್ನು ಅಭಿನಂದಿಸಲಾಯಿತು. ಕರ್ನಾಟಕ ಕಾಫಿ ಬೆಳಗಾರರ ಸಂಘ ಅರೇಹಳ್ಳಿಯ ನಿರ್ಗಮಿತ ಅಧ್ಯಕ್ಷರಾದ ಮಂಜುನಾಥ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ನೂತನ ಅಧ್ಯಕ್ಷರು ಮತ್ತು ಗೌರವ ಕಾರ್ಯದರ್ಶಿಗಳನ್ನು ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕರ್ನಾಟಕ ಬೆಳಗಾರರ ಒಕ್ಕೂಟದ ಕಚೇರಿ ಕಾರ್ಯದರ್ಶಿ ಕುಮಾರ್ ದಂಪತಿಗಳನ್ನು ಅಭಿನಂದಿಸಲಾಯಿತು. ಬೆಳಗಾರರ ಪ್ರಮುಖ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಕೆ ಎನ್ ಸುಬ್ರಹ್ಮಣ್ಯ ಅಧ್ಯಕ್ಷರು, ಎಂ.ಬಿ ರಾಜೀವ್ ಗೌರವ ಕಾರ್ಯದರ್ಶಿ , ಕಸಬಾ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಲೋಹಿತ್ ಕೌಡಹಳ್ಳಿ ಸೇರಿದಂತೆ ಇತರರು ಹಾಜರಿದ್ದರು.