ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಎಚ್. ಪಿ. ಸಂದೇಶ್‌ರವರ ಪ್ರಾಮಾಣಿಕತೆಯ ಪರ ಇಡೀ ದೇಶವೇ ಸಾಥ್ ನೀಡುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಜೈ ಮಾರುತಿ ದೇವರಾಜ್ ಅಭಿಪ್ರಾಯ ಪಟ್ಟಿದ್ದಾರೆ.
ಪ್ರಸ್ತುತ ವ್ಯವಸ್ಥೆಯಲ್ಲಿ ಭೃಷ್ಠಾಚಾರ ಮಿತಿ ಮೀರಿದೆ. ಇದು ಬಹಳ ಖೇದಕರ ಸಂಗತಿ ಎಂದಿರುವ ಅವರು ನ್ಯಾಯದ ಪರವಾಗಿ ಮಾತನಾಡುವವರಿಗೆ ಬೆದರಿಕೆ ಹಾಕುವ ಪ್ರವೃತ್ತಿ ಆರಂಭವಾಗಿರುವುದು ಕೂಡಾ ಶೋಭೆ ತರುವಂತ ವಿಚಾರವಲ್ಲ ಎಂದು ಹೇಳಿದ್ದಾರೆ.
ಇದೇ ಪ್ರವೃತ್ತಿಗಳು ಮುಂದುವರಿಯುತ್ತಾ ಹೋದರೆ ಮುಂದಿನ ಪೀಳಿಗೆ ಕೂಡಾ ಸಮಸ್ಯೆಗೆ ಈಡಾಗಬಲ್ಲದು ಎಂದಿರುವ ಅವರು ಸಂದೇಶ್‌ರಂತಹ ಪ್ರಾಮಾಣಿಕ ವ್ಯಕ್ತಿಗಳು ಸಮಾಜಕ್ಕೆ ಸದಾ ಆದರ್ಶ ಪ್ರಾಯ ಎಂದು ಹೇಳಿದ್ದಾರೆ.
ನ್ಯಾಯಾಲಯದ ವಿಚಾರಗಳಲ್ಲಿ ನಾವು ಯಾರು ಕೂಡಾ ಪ್ರವೇಶ ಮಾಡುವಂತಿಲ್ಲ. ಆದರೆ ಸತ್ಯ, ನಿಷ್ಟೆ, ಪ್ರಾಮಾಣಿಕತೆಗೆ ಸದಾ ಗೆಲುವಿದೆ ಎಂದು ಮಾತ್ರ ಹೇಳ ಬಲ್ಲೆ ಎಂದು ತಿಳಿಸಿದ್ದಾರೆ.