Thursday, January 30, 2025
Homeಸುದ್ದಿಗಳುಸಕಲೇಶಪುರಗ್ರಾಮ ಪಂಚಾಯತ್ಗಳಿಗೆ ಕರೆಂಟ್ ಶಾಕ್

ಗ್ರಾಮ ಪಂಚಾಯತ್ಗಳಿಗೆ ಕರೆಂಟ್ ಶಾಕ್

ವಿದ್ಯುತ್ ಬಿಲ್‌ನ್ನು ಸಮರ್ಪಕವಾಗಿ ಪಾವತಿ ಮಾಡದ ಗ್ರಾಮ ಪಂಚಾಯತುಗಳಿಗೆ ತಕ್ಷಣ ಹಣ ಪಾವತಿ ಮಾಡುವಂತೆ ಸಕಲೇಶಪುರ ತಾಲೂಕು ಪಂಚಾಯತ್‌ನ ಕಾರ್ಯನಿರ್ವಹಣಧಿಕಾರಿ ಹರೀಶ್ ತಿಳಿಸಿದ್ದಾರೆ.

ಸಕಲೇಶಪುರದಲ್ಲಿ ಈಗಾಗಲೇ 26 ಗ್ರಾಮ ಪಂಚಾಯತುಗಳು ಸುಮಾರು 2 ಕೋಟಿ 80ಲಕ್ಷ 53 ಸಾವಿರದ 167 ಮೊತ್ತವನ್ನು ಸೆಸ್ಕಂಗೆ ಪಾವತಿ ಮಾಡ ಬೇಕಿದೆ. ಪ್ರತೀ ತಿಂಗಳಲ್ಲಿ ಕೂಡಾ ಈ ಮೊತ್ತಗಳು ಪಾವತಿ ಯಾಗುತ್ತವೆ.

ಗ್ರಾಮ ಪಂಚಾಯತುಗಳು ಮೊತ್ತವನ್ನು ಹೆಚ್ಚಾಗಿ ಬಾಕಿ ಇರಿಸಿಕೊಂಡ ಕೂಡಲೇ ಆ ಗ್ರಾಮ ಪಂಚಾಯತುಗಳ ಗಮನಕ್ಕೆ ತರಲಾಗುತ್ತದೆ. ಇಷ್ಟಕ್ಕೂ ಪಾವತಿ ಮಾಡದಿದ್ದಲ್ಲಿ ವಿದ್ಯುತ್ ಸೇವೆಯನ್ನು ಸ್ಥಗಿತ ಮಾಡಲಾಗುತ್ತದೆ.

🌹ಅತೀ ಹೆಚ್ಚು ಮೊತ್ತ ಬಾಕಿ ಇರಿಸಿದ ಗ್ರಾಮ ಪಂಚಾಯತುಗಳು🌹

🌹ಬ್ಯಾಕರವಳ್ಳಿ 74ಲಕ್ಷದ 45 ಸಾವಿರದ 876
🌹ಬಾಳ್ಳುಪೇಟೆ 55ಲಕ್ಷ 25 ಸಾವಿರ 224
🌹ಆನೆ ಮಹಲ್ 37 ಲಕ್ಷ 33 ಸಾವಿರ 863
🌹ಯಸಲೂರು 21ಲಕ್ಷ 12 ಸಾವಿರ 464
🌹ಹೆಬ್ಬಸಾಲೆ 13 ಲಕ್ಷ 9 ಸಾವಿರ 599
🌹ಹಾನುಬಾಳು 10ಲಕ್ಷ 87ಸಾವಿರ 551

ಈ ಗ್ರಾಮ ಪಂಚಾಯತುಗಳು ಅತೀ ಹೆಚ್ಚು ವಿದ್ಯುತ್ ಮೊತ್ತವನ್ನು ಸೆಸ್ಕಾಂಗೆ ಪಾವತಿ ಮಾಡದೆ ಬಾಕಿ ಇರಿಸಿ ಕೊಂಡಿದೆ ಎಂದು ತಿಳಿದು ಬಂದಿದೆ.

ಬಾಕಿ ಇದೇರೀತಿ ಮುಂದುವರಿಯುತ್ತಾ ಹೋದಲ್ಲಿ ಆ ಗ್ರಾಮ ಪಂಚಾಯತುಗಳ ವಿದ್ಯುತ್ ಕಡಿತ ಮಾಡಲಾಗುತ್ತದೆ. ಹೀಗಾದರೆ ಗ್ರಾಮಸ್ಥರಿಗೆ ಊರಲ್ಲಿ ವಿದ್ಯುತ್ ಲಭ್ಯವಾಗದು ಎಂದು ತಿಳಿದು ಬಂದಿದೆ.

RELATED ARTICLES
- Advertisment -spot_img

Most Popular