Monday, January 26, 2026
Homeಸುದ್ದಿಗಳುಸಕಲೇಶಪುರಗಾಂಜಾ ಸೇವನೆ ಹಿನ್ನಲೆಯಲ್ಲಿ ಯುವಕನ ಮೇಲೆ ಪ್ರಕರಣ ದಾಖಲು

ಗಾಂಜಾ ಸೇವನೆ ಹಿನ್ನಲೆಯಲ್ಲಿ ಯುವಕನ ಮೇಲೆ ಪ್ರಕರಣ ದಾಖಲು

 

ಸಕಲೇಶಪುರ: ಗಾಂಜಾ ಸೇವನೆ ಹಿನ್ನೆಲೆಯಲ್ಲಿ ಯುವಕನೋರ್ವನ ಮೇಲೆ ಅಬಕಾರಿ  ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.

   ದಿನಾಂಕ:14/11/2022 ರಂದು  ಸಂಜೆ 3 ಗಂಟೆಯ ಸಮಯದಲ್ಲಿ ಸಕಲೇಶಪುರ ಪಟ್ಟಣದ ಹಳೆ ಬಸ್ ನಿಲ್ದಾಣದ ಸಮೀಪ ಹಣ್ಣಿನ ವ್ಯಾಪಾರ ಮಾಡುವ ಆಜಾದ್ ರಸ್ತೆಯ ಮೊಹಮ್ಮದ್ ಹುಸೇನ್ 31 ವರ್ಷ ಎಂಬಾತ ಗಾಂಜಾ ಸೇವನೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ದಾಳಿ ನಡೆಸಿ ಸದರಿ ವ್ಯಕ್ತಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದರಿಂದ NDPS ಕಾಯ್ದೆಯಂತೆ ಪ್ರಕರಣ ದಾಖಲಿಸಿ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಅಬಕಾರಿ ನಿರೀಕ್ಷಕ ವೆಂಕಟೇಶ ಹೆಚ್. ಕೆ, ಅಬಕಾರಿ ಪೇದೆಗಳಾದ ಗೌಸ್, ಲೋಕೇಶ್, ತೇಜಸ್, ರವಿಕುಮಾರ್ ಚಾಲಕ ರವಿಕುಮಾರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರು.

RELATED ARTICLES
- Advertisment -spot_img

Most Popular