ಆನ್ಲೈನ್ ವಸ್ತುಗಳ ಸಾಗಾಟದ ವಾಹನದ ಲೂಟಿ: ಇಬ್ಬರು ಆರೋಪಿಗಳ ಬಂಧನ
ಸಕಲೇಶಪುರ ಗ್ರಾಮಾಂತರ ಠಾಣಾ ಪೊಲೀಸರ ಭರ್ಜರಿ ಕಾರ್ಯಾಚರಣೆ.
ಸಕಲೇಶಪುರ: ಆನ್ಲೈನ್ ವಸ್ತುಗಳ ಸಾಗಾಟ ಮಾಡುವ ವಾಹನದ ಚಾಲಕನೇ ವಸ್ತುಗಳನ್ನು ಲೂಟಿ ಮಾಡಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಕಲೇಶಪುರ ಗ್ರಾಮಾಂತರ ಪೊಲೀಸರು ಇಬ್ಬರನ್ನು ಬಂಧಿಸಿ, ₹3.65 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ಹಾಸನ ಜಿಲ್ಲೆ ನಿಡುಡಿ ಗ್ರಾಮದ ಶಶಿಕುಮಾರ್ ಮತ್ತು ಶ್ರೀಕಾಂತ್ ಬಂಧಿತ ಆರೋಪಿಗಳು.ಮಾರ್ಚ್ 19, 2025ರಂದು ಬೆಂಗಳೂರಿನಿಂದ ಮಂಗಳೂರಿಗೆ ಸಾಗಿಸುತ್ತಿದ್ದ ವಸ್ತುಗಳ ವಾಹನದ ಚಾಲಕನು, ಶಿರಾಡಿ ಘಾಟ್ ಬಳಿ ವಾಹನ ನಿಲ್ಲಿಸಿ, ₹4,98,051 ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು ಈ ಕುರಿತು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು, ಬಂಧಿತರಿಂದ ಆನ್ಲೈನ್‌ನಲ್ಲಿ ಬುಕ್ ಮಾಡಲಾಗಿದ್ದ ₹3.65 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ
ಘಟನೆ ಸಂಬಂಧ ಮಾನ್ಯ ಎಸ್.ಪಿ. ಮೊಹಮ್ಮದ್ ಸುಜೀತ್, ಹೆಚ್ಚುವರಿ ಎಸ್.ಪಿ. ತಿಮ್ಮಯ್ಯ, ಸಕಲೇಶಪುರ ಡಿ.ವೈ.ಎಸ್.ಪಿ. ಪ್ರಮೋದ್ ಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ನಿರಂಜನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ತನಿಖೆ ಮುಂದುವರಿಸಲಾಯಿತು.
ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಸರ್ದಾರ್ ಪಾಷ (ಕ್ರೈಂ), ಪಿ.ಎಸ್.ಐ ಪ್ರಸನ್ನಕುಮಾರ್ ಹಾಗೂ ಸಿಬ್ಬಂದಿಗಳಾದ ಸುನಿಲ್ ಎಸ್., ರಘು, ಶಶಾಂಕ್, ಆಲೂರು ಠಾಣೆಯ ಪುನೀತ್, ಪೂರ್ಣೇಂದ್ರ ಅವರುಗಳ ತಂಡ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.