ಸಕಲೇಶಪುರ ಶಾಸಕರಾದ ಹೆಚ್. ಕೆ. ಕುಮಾರ ಸ್ವಾಮಿ ಯವರು ಇಂದು ಹಾಡ್ಯ ಗ್ರಾಮಕ್ಕೆ ಸೇರಿದ ಹಳ್ಳಿಬೈಲು ಊರಿಗೆ ಬೇಟಿ ನೀಡಿ ಕಾಡಾನೆ ಧಾಳಿ ಪ್ರದೇಶವನ್ನು ವೀಕ್ಷಿಸಿದರು.
ಈ ಪ್ರದೇಶದಲ್ಲಿ ಕೆಲವು ದಿನಗಳಿಂದ ಕಾಡಾನೆಗಳು ಬೀಡು ಬಿಟ್ಟಿದ್ದು ಆನೇಕ ತೋಟ ಗಳನ್ನು ನಾಶ ಮಾಡಿರುತ್ತವೆ. ಹೆತ್ತೂರು ಪ್ರಕಾಶ ಮತ್ತು ಪಾಪಣ್ಣ ಆವರ ತೋಟಕ್ಕೆ ಶಾಸಕರು ಭೇಟಿ ನೀಡಿ ತೋಟಗಳನ್ನು ವೀಕ್ಷಣೆ ಮಾಡಿದರು.
ಈ ವಿಚಾರವನ್ನು ಅರಣ್ಯ ಸಂರಕ್ಷಣಧಿಕಾರಿಗಳಲ್ಲಿ ತಿಳಿಸಿ ಅವರನ್ನು ಈ ಭಾಗಕ್ಕೆ ಕರೆದು ಕೊಂಡು ಬರುತ್ತೇನೆ ಎಂದು ಹೇಳಿದರು.
ಈ ವಿಚಾರದ ಬಗ್ಗೆ ಸಂಸದರ ಜೊತೆಗೇ ಮಾತನಾಡುತ್ತೇನೆ ಎಂದು ತಿಳಿಸಿದರು.
ಇವರ ಜೊತೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರೂ ಆದ ಶ್ರೀಮತಿ ಉಜ್ಮಾ ರುಜ್ವಿ ಸುದರ್ಶನ್, ಜೆಡಿಎಸ್ ಮುಖಂಡರಾದ ಸುದರ್ಶನ್ ಹಾಗೂ ಬೆಳೆಗಾರರ ಸಂಘದ ಅಧ್ಯಕ್ಷರಾದ ಎಂ ಜೆ ಸಚಿನ್, ಕಾರ್ಯದರ್ಶಿ ದೇವರಾಜು ಹಾಗೂ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ ಮತ್ತು ಹಾಡ್ಲಾಹಳ್ಳಿ ರಮೇಶ್ ಹೆತ್ತೂರು, ಚಂದ್ರ ಶೇಖರ್, ಗಿರೀಶ್, ವೀರೇಶ್ ಹಾಗು ಹಳ್ಳಿಬೈಲು ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು