ಅಲೂರು : ಸಾಕು ನಾಯಿ ಹೊತ್ತೊಯ್ಯುತ್ತಿರುವ ಚಿರತೆ:ಗ್ರಾಮಸ್ಥರಲ್ಲಿ ಆತಂಕ
ಆಲೂರು : ರಾತ್ರಿ ವೇಳೆ ತೋಟದ ಮನೆಗೆ ನುಗ್ಗಿ ಸಾಕು ನಾಯಿಯನ್ನು ಚಿರತೆ ಹೊತ್ತೊಯ್ದು ತಿನ್ನುತ್ತಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.
ಶುಕ್ರವಾರ ರಾತ್ರಿ 12:30 ರ ಸಮಯದಲ್ಲಿ ತಾಲೂಕಿನ ಕೆ. ಹೊಸಕೋಟೆ ಹೋಬಳಿ ಕಾಡ್ಲರೂ ಗ್ರಾಮದ ಕೆ. ಬಿ ಕುಮಾರ ರವರ ಕಾಫಿ ತೋಟದ ಮನೆಯ ಮುಂಭಾಗ ಮಲಗಿದ್ದ ಸಾಕು ನಾಯಿಯೊಂದನ್ನು ಎಳೆದೊಯ್ದ ಚಿರತೆ ಸಮೀಪದ ಕಾಫಿ ತೋಟದಲ್ಲಿ ಮರೆಯಾಗಿದ್ದು ಇದರಿಂದ ಜನರು ಭಯಭೀತರಾಗಿದ್ದಾರೆ.
ಒಂದು ತಿಂಗಳಿನಿಂದಲೂ ಸಕಲೇಶಪುರ ಆಲೂರು ಭಾಗದಲ್ಲಿ ಅಲ್ಲಲ್ಲಿ ಚಿರತೆ ಪ್ರತ್ಯಕ್ಷವಾಗುತ್ತಿರುವ ಸುದ್ದಿಯಿಂದ ಸಾರ್ವಜನಿಕರು ಆತಂಕಗೊಂಡಿದ್ದರು.
ಚಿರತೆಗಳು ಕಾಣಿಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ರಾತ್ರಿ ಪಾಳಿಯಲ್ಲಿ ಅರಣ್ಯ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ. ಮೇಲಾಧಿಕಾರಿಗಳು ಕೂಡಲೇ ಚಿರತೆ ನಿಯಂತ್ರಣಕ್ಕೆ ಕ್ರಮ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ತೋಟದ ಮನೆಗೆ ನುಗ್ಗಿ ಸಾಕು ನಾ ಏನು ಹೊತ್ತೊಯ್ಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲಾಗಿದೆ.
ವರದಿ
ಪ್ರದೀಪ್ ಬಾಳ್ಳುಪೇಟೆ