ಆಲೂರು ತಾಲೂಕಿನ ಮಡಬಲು ಗ್ರಾಮ ಪಂಚಾಯತ್‌ನ ಕಾಮತಿ ಗ್ರಾಮದ ಊರ ಮುಂದಿನ ಕೆರೆ ಯನ್ನು ಅಮೃತ ಸರೋವರ ಯೋಜನೆಯನ್ವಯ ಅಭಿವೃದ್ದಿ ಪಡಿಸಲಾಗಿದೆ.
ಇಂದು ಆ ಕೆರೆಯ ಬಳಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಕಾರ್ಯಕ್ರಮ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಸೇನಾಧಿಕಾರಿ ವಿರೂಪಾಕ್ಷ ರವರು ಧ್ವಜಾರೋಹಣ ನೆರವೇರಿಸುವ ಮೂಲಕ ಮಾಡಲಾಯಿತು. ವಿರೂಪಾಕ್ಷರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ರಿಷಿಕಾಚಂದ್ರ ಸ್ವಾತಂತ್ರ್ಯ ವಿಚಾರವಾಗಿ ಭಾಷಣ ಮಾಡಿದರು.
ಅಭಿವೃದ್ದಿ ಅಧಿಕಾರಿ ಮಹಮ್ಮದ್, ಸಹಾಯಕ ಅಭಿಯಂತರ ಯಶಸ್ವಿನಿ, ಸಹಾಯಕ ನಿರ್ದೇಶಕ ಕೇಶವ, ಗ್ರಾಮ ಪಂಚಾಯತ್ ಅಧ್ಯಕ್ಷ ದೇವರಾಜ್, ಉಪಾಧ್ಯಕ್ಷ ದೈಲ ಮಣಿ, ಅಭಿವೃದ್ದಿ ಅಧಿಕಾರಿ ನಾರಾಯಣ ಸ್ವಾಮಿ, ಕಾರ್ಯದರ್ಶಿ ಗಾಯತ್ರಿ, ಬಿಲ್ ಕಲೆಕ್ಟರ್ ಬಸವಣ್ಣ, ಗ್ರಾಮದ ಹಿರಿಯರಾದ ಲೇಪಾಕ್ಷ, ಸುಂದರ್ ರಾಜ್, ಸೋಮಣ್ಣ, ಗುರುಸ್ವಾಮಿ ಉಪಸ್ಥಿತರಿದ್ದರು.
ಧರ್ಮ ಸ್ವಾಗತಿಸಿ, ಸತೀಶ್ ಕಾರ್ಯಕ್ರಮ ನಿರೂಪಿಸಿದರು.