Tuesday, April 15, 2025
Homeಸುದ್ದಿಗಳುಹಿಜಾಬ್ ಪ್ರಕರಣದ ಅರ್ಜಿ ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

ಹಿಜಾಬ್ ಪ್ರಕರಣದ ಅರ್ಜಿ ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

ಎಲ್ಲೆಡೆ ಕೋಮುದ್ವೇಷ ಹರಡಿದ್ದ ಉಡುಪಿಯಲ್ಲಿನ ವಿದ್ಯಾರ್ಥಿಗಳ ಹಿಜಾಬ್ ಪ್ರಕರಣವು ಇಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿಧ್ವನಿಸಲಿದೆ. ಹಿಜಾಬ್ ಪ್ರಕರಣದ ಅರ್ಜಿ ಇಂದು ವಿಚಾರಣೆಯಾಗಲಿದೆ.

ಹೈಕೋರ್ಟ್ ನಲ್ಲಿ ವಿಚಾರಣೆ ಆದ ಬಳಿಕದ ಆದೇಶ ಪ್ರಶ್ನಿಸಿ ಸುಪ್ರಿಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ನ್ಯಾಯ ಮೂರ್ತಿ ಹೇಮಂತ್ ಗುಪ್ತಾ ನೇತೃತ್ವದ ದ್ವಿ ಸದಸ್ಯ ಪೀಠ ಇಂದು 7 ನೇ ದಿನದ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

ಅರ್ಜಿದಾರರ ಪರ ಕಪಿಲ್ ಸಿಬಲ್, ದೇವದತ್ ಕಾಮತ್, ಸಲ್ಮಾನ್ ಖುರ್ಷಿದ್, ಸೇರಿದಂತೆ 13 ಮಂದಿ ಹಿರಿಯ ಘಟಾನುಘಟಿಗಳು ಇವತ್ತು ಚರ್ಚೆ ಮಂಡಿಸಲಿದ್ದಾರೆ.

ಸರಕಾರದ ಪರ ಸುಧೀರ್ ಮೆಹ್ತಾ ವಾದ ಮಂಡಿಸಲಿದ್ದಾರೆ.

RELATED ARTICLES
- Advertisment -spot_img

Most Popular