ಸಕಲೇಶಪುರ: ಪಟ್ಟಣದ ಮಹೇಶ್ವರಿ ಬಡಾವಣೆಯಲ್ಲಿರುವ ದೇವಸ್ಥಾನದ ಸಮುದಾಯ ಭವನವನ್ನು ಶಾಸಕರ ಸಂಸದರ ಹಾಗೂ ವಿಧಾನಪರಿಷತ್ ಸದಸ್ಯರ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಎಚ್ ಕೆ ಕುಮಾರಸ್ವಾಮಿ ಹೇಳಿದರು
ಪಟ್ಟಣದ ಮಹೇಶ್ವರಿ ನಗರದ ಮಾರಮ್ಮ ದೇವಸ್ಥಾನದ ಸಮೂದಾಯ ಭವನದ ಕಾಮಗಾರಿ ವೀಕ್ಷಿಸಿ ಮಾತನಾಡಿ, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ದೇವಸ್ಥಾನದ ಸಮುದಾಯ ಭವನದ ಕಾಮಗಾರಿಯನ್ನು ಆದಷ್ಟೂ ಶೀಘ್ರವಾಗಿ ಅಭಿವೃದ್ಧಿಪಡಿಸಿ ಭಕ್ತಾದಿಗಳ ಮತ್ತು ಸಾರ್ವಜನಿಕರ ಸೇವೆಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.
ಈ ವೇಳೆ ಪುರಸಭಾ ಮಾಜಿ ಅಧ್ಯಕ್ಷ ಯಾದಗರಿ ಇಬ್ರಾಹಿಂ, ಮಾರಮ್ಮ ದೇವಸ್ಥಾನ ಸಮಿತಿಯ ರವಿ, ಸಂತೋಷ್, ವಿರುಪಾಕ್ಷ, ಈಶ ಮತ್ತು ರೇವಣ್ಣ ಇನ್ನಿತರರು ಉಪಸ್ಥಿತರಿದ್ದರು